ADVERTISEMENT

ಕರ್ನಾಟಕದಲ್ಲಿ ₹56,415 ಕೋಟಿ ಎಫ್‌ಡಿಐ ಹೂಡಿಕೆ

ಪಿಟಿಐ
Published 27 ಮೇ 2025, 16:33 IST
Last Updated 27 ಮೇ 2025, 16:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024-25ನೇ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ₹4.26 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ (ಎಫ್‌ಡಿಐ). 2023–24ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ₹56,415 ಕೋಟಿ ಹೂಡಿಕೆಯಾಗಿದ್ದು, ದೇಶದಲ್ಲಿಯೇ ಮಹಾರಾಷ್ಟ್ರ ಬಳಿಕ ಅತಿಹೆಚ್ಚು ಎಫ್‌ಡಿಐ ಸ್ವೀಕರಿಸಿದ ಎರಡನೇ ರಾಜ್ಯವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ₹1.67 ಲಕ್ಷ ಕೋಟಿ, ದೆಹಲಿ ₹51,209 ಕೋಟಿ, ಗುಜರಾತ್‌ ₹48,648 ಕೋಟಿ, ತಮಿಳುನಾಡು ₹31,407 ಕೋಟಿ, ಹರಿಯಾಣ ₹26,799 ಕೋಟಿ ಮತ್ತು ತೆಲಂಗಾಣದಲ್ಲಿ ₹25,519 ಕೋಟಿ ಹೂಡಿಕೆಯಾಗಿದೆ.

ADVERTISEMENT

ಸೇವೆ, ವ್ಯಾಪಾರ, ದೂರಸಂಪರ್ಕ, ಆಟೊಮೊಬೈಲ್‌, ರಾಸಾಯನಿಕ, ನಿರ್ಮಾಣ ವಲಯದಲ್ಲಿ ಬಂಡವಾಳ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದೆ. 

ತ್ರೈಮಾಸಿಕದಲ್ಲಿ ಇಳಿಕೆ:

2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಹೂಡಿಕೆ ಪ್ರಮಾಣದಲ್ಲಿ ಶೇ 24.5ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.