ADVERTISEMENT

ಫೀಚರ್‌ ಫೋನ್‌ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 14:14 IST
Last Updated 25 ಡಿಸೆಂಬರ್ 2018, 14:14 IST
   

ಫೀಚರ್‌ ಫೋನ್‌ಗಳುಮತ್ತೆ ಗ್ರಾಹಕರನ್ನು ಆಕರ್ಷಿಸಲಾರಂಭಿಸಿವೆಯೇ? ಹೌದು ಎನ್ನುತ್ತಿದೆ ಕೌಂಟರ್‌ಪಾಯಿಂಟ್‌ ಸಂಶೋಧನಾ ಸಂಸ್ಥೆ. ಕ್ಯಾಲೆಂಡರ್ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಂದೆಡೆ ಗರಿಷ್ಠ ಬೆಲೆಯ ಸ್ಮಾರ್ಟ್‌ಫೋನ್‌ಗಳು ಬೇಡಿಕೆ ಕಳೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ಫೀಚರ್‌ಫೋನ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದಿದೆ.

ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 11.20 ಕೋಟಿ ಫೀಚರ್‌ಫೋನ್‌ಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 3ರಷ್ಟು ಪ್ರಗತಿ ಕಂಡಿದೆ.ಈ ಅವಧಿಯಲ್ಲಿ 38 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿದೆ. ಮಧ್ಯಪೂರ್ವ ಮತ್ತು ಆಫ್ರಿಕಾದ ಮಾರುಕಟ್ಟೆಗಳಲ್ಲಿ ಫೀಚರ್‌ಫೋನ್‌ಗಳಿಗೆ ಬೇಡಿಕೆ ಹಚ್ಚಾಗುತ್ತಿದೆ. ಒಂದೇ ವರ್ಷದಲ್ಲಿ ಮಾರಾಟದಲ್ಲಿ ಶೇ 32ರಷ್ಟು ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ಫೀಚರ್‌ಫೋನ್‌ಗಳ ಒಟ್ಟು ಮಾರಾಟದಲ್ಲಿ ಭಾರತ, ಮಧ್ಯಪೂರ್ವ ಮತ್ತು ಆಫ್ರಿಕಾ ಮಾರುಕಟ್ಟೆಗಳ ಪಾಲು ಶೇ 70ರಷ್ಟಿದೆ. ಐಟೆಲ್‌ ಮತ್ತು ಎಚ್‌ಎಂಡಿ ಶೇ 14, ಸ್ಯಾಮ್ಸಂಗ್‌ ಶೇ 8ರಷ್ಟು ಮಾರಾಟದ ಪಾಲು ಹೊಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.