ADVERTISEMENT

ಬಡ್ಡಿದರ ತಗ್ಗಿಸಿದ ಅಮೆರಿಕದ ಫೆಡರಲ್‌ ರಿಸರ್ವ್‌

2019ರಲ್ಲಿ ಮೂರನೇ ಬಾರಿಗೆ ಬಡ್ಡಿದರದಲ್ಲಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 11:17 IST
Last Updated 31 ಅಕ್ಟೋಬರ್ 2019, 11:17 IST
ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೊಮ್‌ ಪಾವೆಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ
ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೊಮ್‌ ಪಾವೆಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌, 2019ರಲ್ಲಿ ಮೂರನೇ ಬಾರಿಗೆ ಬಡ್ಡಿ ದರಗಳಲ್ಲಿ ಕಡಿತ ಮಾಡಿದೆ. ಇದರಿಂದ ಮೂಲ ಬಡ್ಡಿದರವು ಶೇ 1.50 ರಿಂದ ಶೇ 1.75ರ ಮಟ್ಟಕ್ಕೆ ತಲುಪಿದೆ.

ಹೂಡಿಕೆ ಪ್ರಮಾಣ ತಗ್ಗುತ್ತಿರುವುದು, ಚೀನಾದ ಜತೆಗಿನ ವಾಣಿಜ್ಯ ಬಿಕ್ಕಟ್ಟು ಮತ್ತು ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದೆ.

‘ಜಾಗತಿಕ ವಿದ್ಯಮಾನಗಳ ಎದುರು ಅಮೆರಿಕದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಹಾಗೂ ಸದ್ಯ ನಡೆಯುತ್ತಿರುವ ಬಿಕ್ಕಟ್ಟನ್ನು ಉಪಶಮನಗೊಳಿಸುವ ಉದ್ದೇಶದಿಂದ ಮೂರನೇ ಬಾರಿಗೆ ಬಡ್ಡಿದರದಲ್ಲಿ ಕಡಿತ ಮಾಡಲಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಜೆರೊಮ್‌ ಪಾವೆಲ್ ಅವರು ತಿಳಿಸಿದ್ದಾರೆ.

ADVERTISEMENT

2018ರ ಸೆಪ್ಟೆಂಬರ್‌ನಿಂದ 2019ರ ಜುಲೈವರೆಗೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಜುಲೈನಲ್ಲಿ ಬಡ್ಡಿದರ ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಈ ನಿರ್ಧಾರಿಂದ ಹೂಡಿಕೆದಾರರಿಗೆ ಕಡಿಮೆ ಬಡ್ಡಿದರಕ್ಕೆ ಸಾಲ ಲಭ್ಯವಾಗಲಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದಂತಹ ದೇಶಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ.

ಬಡ್ಡಿದರ (%) ಮಾಹಿತಿ...

2019 ಅಕ್ಟೋಬರ್ 30;1.5

2019 ಸೆಪ್ಟೆಂಬರ್‌ 18;1.75

2019 ಜುಲೈ 31;2.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.