ADVERTISEMENT

ಮೊದಲ ಹಂತದ ಸಾಲ ಮೇಳ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 20:31 IST
Last Updated 2 ಅಕ್ಟೋಬರ್ 2019, 20:31 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 250 ಜಿಲ್ಲೆಗಳಲ್ಲಿ ಗುರುವಾರದಿಂದ ಮೊದಲ ಹಂತದ ಸಾಲ ಮೇಳ ನಡೆಸಲಿವೆ.

ಅಕ್ಟೋಬರ್‌ 3 ರಿಂದ ನಾಲ್ಕು ದಿನಗಳವರೆಗೆಮನೆ ಖರೀದಿಸುವವರು, ಮಧ್ಯಮ–ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು (ಎಂಎಸ್‌ಎಂಇ) ಹಾಗೂ ರೈತರಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡಲಿವೆ.

ಮುಖ್ಯವಾಗಿಎಸ್‌ಬಿಐ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳು ಹಬ್ಬದ ಬೇಡಿಕೆಯ ಪ್ರಯೋಜನ ಪಡೆದುಕೊಳ್ಳಲು ಈ ಸಾಲ ಮೇಳದಲ್ಲಿ ಭಾಗವಹಿಸಲಿವೆ.

ADVERTISEMENT

ಎರಡನೇ ಹಂತವು ಅಕ್ಟೋಬರ್ 21 ರಿಂದ 25ರ ಆಸುಪಾಸಿನಲ್ಲಿ 150 ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.