ADVERTISEMENT

ಬದಲಾಗದ ಕನಿಷ್ಠ ಹೂಡಿಕೆ ಮಾನದಂಡ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 19:45 IST
Last Updated 10 ಸೆಪ್ಟೆಂಬರ್ 2019, 19:45 IST
   

ನವದೆಹಲಿ: ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಕುರಿತು ಭಾರತಕ್ಕೆ ನೀಡಿರುವ ಸ್ಥಾನಮಾನವನ್ನು ಮೇಲ್ದರ್ಜೆಗೇರಿಸಲುಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಫಿಚ್‌’ ನಿರಾಕರಿಸಿದೆ.

ಸಾಲದ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ವಿತ್ತೀಯ ಕೊರತೆ ನಿಯಂತ್ರಿಸಲು ಹೆಚ್ಚಿನ ಅವಕಾಶ ಸಿಗುವುದಿಲ್ಲ ಎನ್ನುವ ಕಾರಣ ನೀಡಿ, ಕನಿಷ್ಠ ಹೂಡಿಕೆ ಮಾನದಂಡವನ್ನೇ(ಬಿಬಿಬಿಮೈನಸ್‌) ಮುಂದುವರಿಸಿದೆ.ಆದರೆ, ಈ ಸ್ಥಾನ ಮಾನದ ಮುನ್ನೋಟ ಸ್ಥಿರವಾಗಿರಲಿದೆ ಎಂದು ಹೇಳಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ದರ ಶೇ 6.6 ರಷ್ಟಾಗಲಿದೆ. ಇದು ಕಳೆದ ವರ್ಷ ಇದ್ದ ಶೇ 6.8ಕ್ಕಿಂತಲೂ ಕಡಿಮೆ ಇರಲಿದೆ ಎಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.