ನವದೆಹಲಿ: ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್, ಭಾರತಕ್ಕೆ ನೀಡಿರುವ ರೇಟಿಂಗ್ ಅನ್ನು ‘ಬಿಬಿಬಿ–’ ಮಟ್ಟದಲ್ಲಿ ಉಳಿಸಿಕೊಂಡಿದೆ.
ಶೇ 50ರಷ್ಟು ಸುಂಕ ಹೇರುವ ಅಮೆರಿಕದ ನಿರ್ಧಾರವು ಭಾರತದ ಜಿಡಿಪಿ ಬೆಳವಣಿಗೆ ಮೇಲೆ ತುಸು ಪರಿಣಾಮ ಬೀರಲಿದೆ ಎಂದಿದೆ.
ಕಳೆದ ಎರಡು ವರ್ಷಗಳಲ್ಲಿ ದೇಶದ ಪ್ರಗತಿ ಮಂದವಾಗಿದ್ದರೂ, ಇತರೆ ದೇಶಗಳಿಗೆ ಹೋಲಿಸಿದರೆ ಆರ್ಥಿಕ ಮುನ್ನೋಟವು ಸದೃಢವಾಗಿದೆ ಎಂದು ತಿಳಿಸಿದೆ.
ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆ ಜಾರಿಗೆ ಬಂದರೆ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಾಗಲಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಇರುವ ಅಡ್ಡಿಗಳನ್ನು ಕಡಿಮೆ ಮಾಡಲಿದೆ ಎಂದು ಹೇಳಿದೆ.
ಇತ್ತೀಚೆಗೆ, ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆಯು 18 ವರ್ಷದ ಬಳಿಕ ಭಾರತದ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸಿ, ‘ಬಿಬಿಬಿ’ ರೇಟಿಂಗ್ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.