ADVERTISEMENT

ಬೆಂಗಳೂರು | ಎಫ್‌ಕೆಸಿಸಿಐ: ಉಮಾ ರೆಡ್ಡಿ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 15:16 IST
Last Updated 27 ಸೆಪ್ಟೆಂಬರ್ 2025, 15:16 IST
ಉಮಾ ರೆಡ್ಡಿ
ಉಮಾ ರೆಡ್ಡಿ   

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 2025–26ನೇ ಸಾಲಿನ ಅಧ್ಯಕ್ಷೆಯಾಗಿ ಉಮಾ ರೆಡ್ಡಿ ಅವರು ಶನಿವಾರ ಅಧಿಕಾರ ವಹಿಸಿಕೊಂಡರು. ಈ ಸಂಸ್ಥೆಯ 108 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಇದೇ ಮೊದಲು.

ಎಂಜಿನಿಯರಿಂಗ್ ಪದವೀಧರೆ ಆಗಿರುವ ಉಮಾ ಅವರು ಮೊದಲ ತಲೆಮಾರಿನ ಉದ್ಯಮಿ. ಅವರು ಹೈಟೆಕ್‌ ಮ್ಯಾಗ್ನೆಟಿಕ್ಸ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಪ್ರೈ.ಲಿ. ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಎಫ್‌ಕೆಸಿಸಿಐ ತಿಳಿಸಿದೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳ ಪರವಾಗಿ ಹಲವು ಬಾರಿ ಅವರು ಧ್ವನಿ ಎತ್ತಿದ್ದಾರೆ. ಎಫ್‌ಕೆಸಿಸಿಐ ಅಡಿಯಲ್ಲಿ ಕೆಲಸ ಮಾಡುವ ಹಲವು ಸಮಿತಿಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ, ಎಫ್‌ಕೆಸಿಸಿಐ ಉಪಾಧ್ಯಕ್ಷೆ ಹಾಗೂ ಹಿರಿಯ ಉಪಾಧ್ಯಕ್ಷೆ ಆಗಿಯೂ ಹೊಣೆ ನಿರ್ವಹಿಸಿದ್ದಾರೆ.

ADVERTISEMENT

ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷರಾಗಿ ಟಿ. ಸಾಯಿರಾಮ್ ಪ್ರಸಾದ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಪಿ. ಶಶಿಧರ್ ಅವರು ಆಯ್ಕೆ ಆಗಿದ್ದಾರೆ.

ಬಿ.ಪಿ. ಶಶಿಧರ್
ಟಿ. ಸಾಯಿರಾಮ್ ಪ್ರಸಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.