ADVERTISEMENT

ದೂರದೃಷ್ಟಿಯುಳ್ಳ ಬಜೆಟ್: ಎಫ್‌ಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 19:51 IST
Last Updated 23 ಜುಲೈ 2024, 19:51 IST
ರಮೇಶ್‌ ಚಂದ್ರ ಲಹೋಟಿ
ರಮೇಶ್‌ ಚಂದ್ರ ಲಹೋಟಿ   

ಬೆಂಗಳೂರು: ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಬಜೆಟ್‌ ಆರ್ಥಿಕ ಶಕ್ತಿ ನೀಡಿದೆ. ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್ ಆಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಪ್ರತಿಕ್ರಿಯಿಸಿದೆ.

ಆದರೆ, ಬಜೆಟ್ ಕೆಲವು ರಾಜ್ಯಗಳಿಗೆ ನೀಡಿರುವಂತೆ ಕರ್ನಾಟಕ ರಾಜ್ಯಕ್ಕೆ ಯಾವುದೇ ರೀತಿಯ ನಿರ್ದಿಷ್ಟ ಆದ್ಯತೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

ಸರ್ಕಾರವು ಪಿಎಲ್‌ಐ ಜೊತೆಗೆ ಇಎಲ್‌ಐ (ನೌಕರ ಲಿಂಕ್ಡ್ ಇನ್ಸೆಂಟಿವ್) ಯೋಜನೆಯ ಮೇಲೆ ಗಮನಹರಿಸಿದೆ. ಇಪಿಎಫ್‌ಒ ಮೂಲಕ ಮೊದಲ ಬಾರಿಗೆ ಕೆಲಸ ಮಾಡುವವರಿಗೆ ವೇತನ ಪ್ರಯೋಜನವನ್ನು ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಒತ್ತು ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ  ಹೇಳಿದ್ದಾರೆ.

ಉದ್ಯೋಗ ಮತ್ತು ಕೌಶಲಕ್ಕೆ ಹೆಚ್ಚು ಒತ್ತು ನೀಡಿದ್ದು, ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉನ್ನತ ಶಿಕ್ಷಣಕ್ಕಾಗಿ ₹10 ಲಕ್ಷದವರೆಗಿನ ಸಾಲಗಳಿಗೆ ಹೆಚ್ಚುವರಿ ಬೆಂಬಲ ನೀಡಿದೆ. ಇದು ವಿಕಸಿತ ಭಾರತದ ಗುರಿಯನ್ನು ವೇಗವಾಗಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.