ADVERTISEMENT

ಫ್ಲಿಪ್‌ಕಾರ್ಟ್‌ನಿಂದ ಕ್ಯೂಆರ್‌ ಕೋಡ್ ಆಧಾರಿತ ಪಾವತಿ ಸೌಲಭ್ಯ

ಪಿಟಿಐ
Published 7 ಜೂನ್ 2021, 18:13 IST
Last Updated 7 ಜೂನ್ 2021, 18:13 IST
ಫ್ಲಿಪ್‌ಕಾರ್ಟ್‌–ಸಾಂದರ್ಭಿಕ ಚಿತ್ರ
ಫ್ಲಿಪ್‌ಕಾರ್ಟ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಫ್ಲಿಪ್‌ಕಾರ್ಟ್‌ ಕಂಪನಿಯು ಕ್ಯೂಆರ್‌ ಕೋಡ್‌ ಆಧಾರಿತ ಪಾವತಿ ಸೌಲಭ್ಯವನ್ನು ಜಾರಿಗೆ ತಂದಿದೆ. ಉತ್ಪನ್ನಗಳನ್ನು ಪಡೆದುಕೊಂಡ ನಂತರ ಹಣ ಪಾವತಿಸುವವರಿಗೆ ಇದು ಪ್ರಯೋಜನಕಾರಿ ಆಗಲಿದೆ.

ಉತ್ಪನ್ನವು ಕೈಗೆ ಸಿಕ್ಕಿದ ನಂತರ ಹಣ ಪಾವತಿಸುವ ಆಯ್ಕೆಯನ್ನು (ಕ್ಯಾಶ್ ಆನ್‌ ಡೆಲಿವರಿ) ಪಡೆದವರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ, ಯುಪಿಐ ಸೌಲಭ್ಯ ಇರುವಯಾವುದೇ ಆ್ಯಪ್ ಮೂಲಕ ಹಣ ಪಾವತಿ ಮಾಡಬಹುದು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ವ್ಯಕ್ತಿಗಳ ನಡುವೆ ಅಂತರ ಕಾಪಾಡಿಕೊಳ್ಳಲು ಬಯಸುವ ಸಂದರ್ಭದಲ್ಲಿ ಈ ಬಗೆಯ ಪಾವತಿ ವ್ಯವಸ್ಥೆಯು ಹೆಚ್ಚಿನ ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.