ಬೆಂಗಳೂರು: ಫ್ಲಿಪ್‌ಕಾರ್ಟ್ ಕಂಪನಿಯು ಹುಬ್ಬಳ್ಳಿ, ಆನೇಕಲ್ ಮತ್ತು ಕೋಲಾರದಲ್ಲಿ ಹೊಸದಾಗಿ ಗೋದಾಮು ಆರಂಭಿಸಿದೆ. ಇವು ರಾಜ್ಯದಲ್ಲಿನ ವರ್ತಕರು, ಎಂಎಸ್‌ಎಂಇ ಉದ್ಯಮಗಳಿಗೆ ನೆರವಾಗುತ್ತವೆ ಹಾಗೂ 14 ಸಾವಿರ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.
ಈ ಮೂರೂ ಕೇಂದ್ರಗಳು ದೊಡ್ಡ ಪ್ರಮಾಣದ ಫರ್ನಿಚರ್, ಮೊಬೈಲ್ ಫೋನ್‌ಗಳು, ಜವಳಿ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ನೆರವಾಗಲಿವೆ. ಈ ಮೂರೂ ಕೇಂದ್ರಗಳ ಒಟ್ಟು ವಿಸ್ತೀರ್ಣ 7 ಲಕ್ಷ ಚದರ ಅಡಿ. ಇವುಗಳಿಂದಾಗಿ 10,500 ಕ್ಕೂ ಹೆಚ್ಚು ಮಾರಾಟಗಾರರಿಗೆ ನೆರವಾಗಲಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.