ADVERTISEMENT

ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ಮೌಲ್ಯ ₹41 ಸಾವಿರ ಕೋಟಿ ಇಳಿಕೆ

ಪಿಟಿಐ
Published 17 ಮಾರ್ಚ್ 2024, 14:55 IST
Last Updated 17 ಮಾರ್ಚ್ 2024, 14:55 IST
ಫ್ಲಿಪ್‌ಕಾರ್ಟ್‌
ಫ್ಲಿಪ್‌ಕಾರ್ಟ್‌   

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಇ–ಕಾಮರ್ಸ್‌ ಸಂಸ್ಥೆಯಾದ ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಮೌಲ್ಯವು ₹41 ಸಾವಿರ ಕೋಟಿ ಇಳಿಕೆಯಾಗಿದೆ ಎಂದು ಕಂಪನಿಯ ಮಾತೃಸಂಸ್ಥೆಯಾದ ವಾಲ್‌ಮಾರ್ಟ್‌ ಹೇಳಿದೆ.

2022ರ ಜನವರಿ ಅಂತ್ಯದಲ್ಲಿ ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಮೌಲ್ಯ ₹3.31 ಲಕ್ಷ ಕೋಟಿ ಇತ್ತು. ಪ್ರಸಕ್ತ ವರ್ಷದ ಜನವರಿ ಅಂತ್ಯಕ್ಕೆ ₹2.90 ಲಕ್ಷ ಕೋಟಿಗೆ ಕುಸಿದಿದೆ. ಫೋನ್‌ ಪೇ ವಿಭಜನೆಗೊಂಡು ಸ್ವತಂತ್ರ ಕಂಪನಿಯಾಯಿತು. ಇದೇ ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದೆ. 

ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಶೇ 85ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.