ಬೆಂಗಳೂರು: ಕಿರಾಣಿ ಅಂಗಡಿ ಮಾಲೀಕರ ದುಡಿಯುವ ಬಂಡವಾಳದ ಅಗತ್ಯವನ್ನು ಪೂರೈಸಲು ‘ಫ್ಲಿಪ್‌ಕಾರ್ಟ್ ಹೋಲ್‌ಸೇಲ್’, ಅವರಿಗೆ ಸಾಲ ಪಡೆಯಲು ನೆರವಾಗಲಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿರುವ ಫ್ಲಿಪ್‌ಕಾರ್ಟ್ ಹೋಲ್‌ಸೇಲ್, ಗರಿಷ್ಠ ₹ 2 ಲಕ್ಷದವರೆಗೆ ಸಾಲ ಪಡೆಯಲು ನೆರವು ನೀಡಲಿದೆ.
ಈ ಯೋಜನೆಯ ಅಡಿಯಲ್ಲಿ ಕಿರಾಣಿ ಅಂಗಡಿಗಳ ಮಾಲೀಕರು ಶೂನ್ಯ ವೆಚ್ಚದಲ್ಲಿ, ಎರಡು ನಿಮಿಷಗಳಲ್ಲಿ ಸಾಲ ಪಡೆಯಬಹುದು. ಸಾಲ ಹಿಂದಿರುಗಿಸಲು 14 ದಿನಗಳ ಬಡ್ಡಿ ರಹಿತ ಅವಧಿಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಸಾಲದ ಮರುಪಾವತಿಗೆ ವಿವಿಧ ಆಯ್ಕೆಗಳು ಲಭ್ಯವಿರಲಿವೆ. ‘ಭಾರತದ ಚಿಲ್ಲರೆ ಮಾರಾಟ ವಲಯದಲ್ಲಿ ಕಿರಾಣಿ ಅಂಗಡಿಗಳ ಪಾಲು ಮೂರನೆಯ ಎರಡರಷ್ಟಕ್ಕಿಂತ ಹೆಚ್ಚಿದೆ. ಈ ಸಾಂಪ್ರದಾಯಿಕ ವಹಿವಾಟು ಈಗ ಇನ್ನಷ್ಟು ವಿಕಾಸ ಹೊಂದುತ್ತಿದೆ’ ಎಂದು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.