ADVERTISEMENT

‘ನೀತಿ ಎನ್‌ಸಿಎಇಆರ್’ ಪೋರ್ಟಲ್‌ಗೆ ಇಂದು ಚಾಲನೆ

ಪಿಟಿಐ
Published 31 ಮಾರ್ಚ್ 2025, 21:32 IST
Last Updated 31 ಮಾರ್ಚ್ 2025, 21:32 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ‘ನೀತಿ ಎನ್‌ಸಿಎಇಆರ್ ರಾಜ್ಯಗಳ ಆರ್ಥಿಕ ವೇದಿಕೆ’ ಪೋರ್ಟಲ್‌ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಚಾಲನೆ ನೀಡಲಿದ್ದಾರೆ.

ಕಳೆದ ಮೂರು ದಶಕಗಳಿಂದ 2022–23ರ ಆರ್ಥಿಕ ವರ್ಷದವರೆಗಿನ ರಾಜ್ಯಗಳ ಸಾಮಾಜಿಕ, ಆರ್ಥಿಕತೆಯ ಸಮಗ್ರ ಮಾಹಿತಿಯನ್ನು ಈ ಪೋರ್ಟಲ್‌ ಒದಗಿಸಲಿದೆ. ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಸಹಯೋಗದೊಂದಿಗೆ ನೀತಿ ಆಯೋಗ ಈ ಪೋರ್ಟಲ್‌ನ್ನು ಸಿದ್ಧಪಡಿಸಿದೆ. 

ಜನಸಂಖ್ಯಾಶಾಸ್ತ್ರ, ಆರ್ಥಿಕ ರಚನೆ, ಹಣಕಾಸು, ಆರೋಗ್ಯ ಮತ್ತು ಶಿಕ್ಷಣ ಎನ್ನುವ 5 ಭಾಗವಾಗಿ ವರ್ಗೀಕರಿಸಲಾಗಿದೆ. ಜೊತೆಗೆ ಈ ಪೋರ್ಟಲ್‌ ದೇಶದ 28 ರಾಜ್ಯಗಳ ಜನಸಂಖ್ಯಾಶಾಸ್ತ್ರ, ಆರ್ಥಿಕ ರಚನೆ, ಸಾಮಾಜಿಕ–ಆರ್ಥಿಕ ಮತ್ತು ಹಣಕಾಸಿನ ಸೂಚ್ಯಂಕಗಳ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡಿದ್ದು, ಕಳೆದ 30 ವರ್ಷಗಳ ಪ್ರತಿ ರಾಜ್ಯದ ದತ್ತಾಂಶವನ್ನು ಒದಗಿಸುತ್ತದೆ ಎಂದು ನೀತಿ ಆಯೋಗ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.