ADVERTISEMENT

2019–20ರ ವರ್ಷದಲ್ಲಿ ದಾಖಲೆ ಆಹಾರ ಧಾನ್ಯ ಉತ್ಪಾದನೆ

2019-20ರ ಬೆಳೆ ವರ್ಷದಲ್ಲಿ 29.56 ಕೋಟಿ ಟನ್‌

ಪಿಟಿಐ
Published 15 ಮೇ 2020, 19:52 IST
Last Updated 15 ಮೇ 2020, 19:52 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ    
""

ನವದೆಹಲಿ: ದೇಶದ ಆಹಾರ ಧಾನ್ಯಗಳ ಉತ್ಪಾದನೆಯು 2019–20ರ ಬೆಳೆ ವರ್ಷದಲ್ಲಿ ದಾಖಲೆ ಮಟ್ಟವಾದ 29.56 ಕೋಟಿ ಟನ್‌ಗಳಿಗೆ ತಲುಪಿದೆ.

ಇದು ಹಿಂದಿನ ವರ್ಷದ ಉತ್ಪಾದನೆಗಿಂತ 1.46 ಕೋಟಿ ಟನ್‌ ಹೆಚ್ಚಿಗೆ ಇದೆ. ಉತ್ತಮ ಮಳೆಯಿಂದಾಗಿ ಸತತ ನಾಲ್ಕನೇ ವರ್ಷವೂ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಬೆಳೆದಿರುವುದು ಕೃಷಿ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

2019–20ರ ಜುಲೈನಿಂದ ಜೂನ್‌ ಅವಧಿಯ ಬೆಳೆ ವರ್ಷದಲ್ಲಿ ಭತ್ತ, ಗೋಧಿ, ಒರಟು ಧಾನ್ಯ, ತೈಲ ಬೀಜ ಮತ್ತು ಹತ್ತಿ ಉತ್ಪಾದನೆಯಲ್ಲಿ ಹೆಚ್ಚಳ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.