ADVERTISEMENT

ನವೋದ್ಯಮ: ಏಂಜಲ್‌ ಟ್ಯಾಕ್ಸ್‌ ವ್ಯಾಪ್ತಿಗೆ ವಿದೇಶಿ ಹೂಡಿಕೆ

ಪಿಟಿಐ
Published 26 ಸೆಪ್ಟೆಂಬರ್ 2023, 16:22 IST
Last Updated 26 ಸೆಪ್ಟೆಂಬರ್ 2023, 16:22 IST
   

ನವದೆಹಲಿ: ನೋಂದಾಯಿಸಿಕೊಳ್ಳದೇ ಇರುವ ನವೋದ್ಯಮಗಳು ವಿದೇಶಿ ಹೂಡಿಕೆದಾರರಿಂದ ಸಂಗ್ರಹಿಸುವ ಈಕ್ವಿಟಿ ಬಂಡವಾಳಕ್ಕೂ ತೆರಿಗೆ ಪಾವತಿಸಬೇಕಾಗಲಿದೆ. 

ಸೋಮವಾರದಿಂದ ಜಾರಿಗೆ ಬರುವಂತೆ ಏಂಜಲ್‌ ಟ್ಯಾಕ್ಸ್‌ ನಿಯಮದಲ್ಲಿ  ಈ ಸಂಬಂಧ ಕೇಂದ್ರ ಸರ್ಕಾರವು ಬದಲಾವಣೆ ತಂದಿದೆ.

ನವೋದ್ಯಮಗಳು ಷೇರುಗಳನ್ನು ಮಾರಾಟ ಮಾಡುವ ಮೂಲಕ ವಿದೇಶಿ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಿದಲ್ಲಿ, ಅದು ಅವುಗಳ ನ್ಯಾಯಸಮ್ಮತ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿಗೆ ಇದ್ದರೆ ವ್ಯತ್ಯಾಸದ ಮೊತ್ತಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಶೇ 30ರವರೆಗೆ ತೆರಿಗೆ ಪಾವತಿಸಬೇಕಾಗುತ್ತದೆ.

ADVERTISEMENT

ವಿದೇಶಿ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಲು ಉದ್ದೇಶಿಸಿರುವ ನವೋದ್ಯಮಗಳ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆ ಮಾಡಲಾಗಿದೆ.

ದೇಶಿ ಹೂಡಿಕೆದಾರರು ಮಾಡುವ ಹೂಡಿಕೆಗಳಿಗೆ ಈಗಾಗಲೇ ತೆರಿಗೆ ಪಾವತಿಸುತ್ತಿದ್ದಾರೆ. 2023–24ರ ಬಜೆಟ್‌ನಲ್ಲಿ ಏಂಜಲ್‌ ಟ್ಯಾಕ್ಸ್‌ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ವಿದೇಶಿ ಹೂಡಿಕೆದಾರರನ್ನೂ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.