ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ

ಪಿಟಿಐ
Published 15 ಮಾರ್ಚ್ 2019, 20:06 IST
Last Updated 15 ಮಾರ್ಚ್ 2019, 20:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್‌ 1ಕ್ಕೆ ಕೊನೆಗೊಂಡ ವಾರದಲ್ಲಿ ₹ 18,130 ಕೋಟಿಗಳಷ್ಟು ಹೆಚ್ಚಾಗಿ ಮತ್ತೊಮ್ಮೆ ₹ 28 ಲಕ್ಷ ಕೋಟಿಯ ಗಡಿ ತಲುಪಿದೆ. ಅದಕ್ಕೂ ಹಿಂದಿನ ವಾರ ₹ 28.12 ಲಕ್ಷ ಕೋಟಿಗೆ ತಲುಪಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.

2018ರ ಏಪ್ರಿಲ್ 13ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 29.82 ಲಕ್ಷ ಕೋಟಿಗಳಿಗೆ ತಲುಪಿತ್ತು. ಆ ಬಳಿಕ ₹ 1.75 ಲಕ್ಷ ಕೋಟಿಗಳಷ್ಟು ಇಳಿಕೆ ಕಂಡಿತ್ತು. ಚಿನ್ನದ ಮೀಸಲು ಸಂಗ್ರಹ ₹ 341 ಕೋಟಿ ಹೆಚ್ಚಾಗಿ ₹ 1.62 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT