ADVERTISEMENT

ಎಫ್‌ಪಿಐ: ₹ 900 ಕೋಟಿ ಹೊರಹರಿವು

ಪಿಟಿಐ
Published 6 ಸೆಪ್ಟೆಂಬರ್ 2020, 13:03 IST
Last Updated 6 ಸೆಪ್ಟೆಂಬರ್ 2020, 13:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಸೆಪ್ಟೆಂಬರ್ 1ರಿಂದ 4ರವರೆಗಿನ ಅವಧಿಯ ವಹಿವಾಟಿನಲ್ಲಿ ಮಾರುಕಟ್ಟೆಯಿಂದ ₹ 900 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿದಲ್ಲಿ ಜಿಡಿಪಿ ಕುಸಿತ ಹಾಗೂ ಭಾರತ–ಚೀನಾ ಗಡಿ ಬಿಕ್ಕಟ್ಟು ಬಂಡವಾಳ ಹೊರಹರಿವಿಗೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಲಾಭ ಗಳಿಸಿಕೊಳ್ಳುವ ಉದ್ದೇಶದಿಂದಲೂ ಬಂಡವಾಳ ಹಿಂತೆಗೆತ ಆಗಿರಬಹುದು ಎಂದೂ ಹೇಳಿದ್ದಾರೆ.

ಹೂಡಿಕೆದಾರರು ₹ 675 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 225 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ.

ADVERTISEMENT

ಇದಕ್ಕೂ ಹಿಂದೆ, ಆಗಸ್ಟ್‌ನಲ್ಲಿ ₹ 46,532 ಕೋಟಿ, ಜುಲೈನಲ್ಲಿ ₹ 24,053 ಕೋಟಿ ಹಾಗೂ ಜೂನ್‌ನಲ್ಲಿ ₹ 24,053 ಕೋಟಿ ಹೂಡಿಕೆ ಮಾಡಿದ್ದರು.

‘ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮವಾಗಿ, ಅಮೆರಿಕದ ಷೇರುಪೇಟೆಯಲ್ಲಿ ಮಾರಾಟದ ಒತ್ತಡದಿಂದಾಗಿ ಮುಂದಿನ ವಾರಗಳಲ್ಲಿ ಎಫ್‌ಪಿಐ ಹೊರಹರಿವು ಇನ್ನೂ ಹೆಚ್ಚಾಗಬಹುದು’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರುಸ್ಮಿಕ್‌ ಓಜಾ ಹೇಳಿದ್ದಾರೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುವರಿ ನಗದು ಲಭ್ಯವಿರುವುದರಿಂದ ಬಿಕ್ಕಟ್ಟಿನ ನಡುವೆಯೂ ಭಾರತವು ತನ್ನ ಪಾಲಿನ ಹೂಡಿಕೆಯನ್ನು ಪಡೆಯುವ ಸಾಧ್ಯತೆ ಇದೆ’ ಎನ್ನುವುದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.