ADVERTISEMENT

ಎಫ್‌ಪಿಐ: 99,299 ಕೋಟಿ ಬಂಡವಾಳ ವಾಪಸ್‌

ಪಿಟಿಐ
Published 16 ಫೆಬ್ರುವರಿ 2025, 14:39 IST
Last Updated 16 ಫೆಬ್ರುವರಿ 2025, 14:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜಾಗತಿಕ ಅನಿಶ್ಚಿತತೆ ಹಾಗೂ ಅಮೆರಿಕದ ಸುಂಕ ನೀತಿಯಿಂದಾಗಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳದ ಹೊರಹರಿವಿನ ಪ್ರಮಾಣ ತಹಬಂದಿಗೆ ಬಂದಿಲ್ಲ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜನವರಿ‌ಯಿಂದ ಇಲ್ಲಿಯವರೆಗೆ 99,299 ಕೋಟಿಯನ್ನು ಹಿಂಪಡೆದಿದ್ದಾರೆ.

ಜನವರಿಯಲ್ಲಿ ಒಟ್ಟು 78,027 ಕೋಟಿ ಬಂಡವಾಳ ವಾಪಸ್‌ ಪಡೆದಿದ್ದರು. ಫೆಬ್ರುವರಿಯ ಆರಂಭದಿಂದ 14ರ ವರೆಗೆ ₹21,272 ಕೋಟಿ ಹಿಂಪಡೆದಿದ್ದಾರೆ.

‘ಸದ್ಯ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟದಲ್ಲಿ ತೊಡಗಿದ್ದಾರೆ. ಡಾಲರ್‌ ಸೂಚ್ಯಂಕ ಇಳಿಕೆಯಾದಾಗ ಮತ್ತೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ‍ಪ್ರಮಾಣ ಹೆಚ್ಚಲಿದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.