ADVERTISEMENT

ಸತತ 21ನೇ ದಿನ ಇಂಧನ ದರ ಏರಿಕೆ: ಪೆಟ್ರೋಲ್‌ 25 ಪೈಸೆ, ಡೀಸೆಲ್‌ 21 ಪೈಸೆ ಹೆಚ್ಚಳ

ಏಜೆನ್ಸೀಸ್
Published 27 ಜೂನ್ 2020, 3:02 IST
Last Updated 27 ಜೂನ್ 2020, 3:02 IST
   

ನವದೆಹಲಿ:ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸತತ 21ನೇ ದಿನವೂ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿಪೆಟ್ರೋಲ್‌ ದರ ₹ 80.38ಮತ್ತು ಡೀಸೆಲ್‌ ದರ ₹ 80.40ಕ್ಕೆ ತಲುಪಿದೆ.

ಕೋವಿಡ್–19 ಸೋಂಕು ಭೀತಿಯಿಂದಾಗಿ ಜಾರಿಯಲ್ಲಿದ್ದಲಾಕ್‌ಡೌನ್‌ ಸಡಿಲಿಕೆ ಬಳಿಕಜೂನ್‌ 7ರಿಂದ ಇಂಧನ ದರಪರಿಷ್ಕರಣೆ ಆರಂಭಿಸಲಾಗಿದೆ. ಅಂದಿನಿಂದಲೂ ತೈಲ ಬೆಲೆ ಏರುಗತಿಯಲ್ಲಿ ಸಾಗಿದ್ದು,ಶನಿವಾರ ಪೆಟ್ರೋಲ್ ಮತ್ತುಡೀಸೆಲ್‌ ದರ ಕ್ರಮವಾಗಿ 25 ಪೈಸೆ ಮತ್ತು 21 ಪೈಸೆ ಹೆಚ್ಚಳವಾಗಿದೆ.

ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಇಂಧನ ದರ ಏರಿಕೆ ‘ನ್ಯಾಯಯುತವಲ್ಲ’ ಮತ್ತು ‘ಚಿಂತನೆ ರಹಿತವಾದದ್ದು’. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು, ಕಚ್ಚಾ ತೈಲ ಬೆಲೆ ಇಳಿಕೆಯ ಲಾಭವನ್ನು ನೇರವಾಗಿ ನಾಗರಿಕರಿಗೆ ತಲುಪಿಸಬೇಕು ಎಂದು ಆಗ್ರಹಿಸಿದೆ.

ADVERTISEMENT

ದೇಶದಲ್ಲಿ ಲಾಕ್‌ಡೌನ್ ಜಾರಿಯಾಗುವ ಮೊದಲು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ ₹ 69.60 ಮತ್ತು ₹ 62.30 ಇತ್ತು.

ಲಾಕ್‌ಡೌನ್ ಬಳಿಕ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಸಾರಿಗೆ ಉದ್ಯಮಕ್ಕೆ ಇಂಧನ ದರ ಏರಿಕೆಯಿಂದದೊಡ್ಡ ಹೊಡೆತ ಬಿದ್ದಂತಾಗಿದೆ. ಇದರಿಂದಾಗಿಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಲಿದೆ ಎಂದೂ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.