ADVERTISEMENT

ಬೆಲೆ ಏರಿಕೆ ಪರಿಣಾಮ: ಪೆಟ್ರೋಲ್‌, ಡೀಸೆಲ್‌ ಮಾರಾಟ ಇಳಿಕೆ

ಪಿಟಿಐ
Published 16 ಏಪ್ರಿಲ್ 2022, 11:04 IST
Last Updated 16 ಏಪ್ರಿಲ್ 2022, 11:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿಏಪ್ರಿಲ್‌ 1 ರಿಂದ 16ರ ಅವಧಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟದಲ್ಲಿ ಇಳಿಕೆ ಆಗಿದೆ. ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಿರುವುದರಿಂದ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ ಎಂದು ಉದ್ಯಮ ವಲಯದ ಮೂಲಗಳು ಹೇಳಿವೆ.

ಮಾರ್ಚ್‌ 1-15ರವರೆಗೆ ಆಗಿರುವ ಮಾರಾಟಕ್ಕೆ ಹೋಲಿಸಿದರೆ ಏಪ್ರಿಲ್‌ 1–15ರವರೆಗೆ ಪೆಟ್ರೋಲ್‌ ಮಾರಾಟ ಶೇ 10ರಷ್ಟು ಇಳಿಕೆ ಆಗಿದೆ. ಡೀಸೆಲ್‌ ಮಾರಾಟ ಶೇ 15.6ರಷ್ಟು ಕಡಿಮೆ ಆಗಿದೆ ಎಂದು ಉದ್ಯಮ ವಲಯ ಮಾಹಿತಿ ನೀಡಿದೆ.

ಏಪ್ರಿಲ್‌ 1–15ರವರೆಗಿನ ಅವಧಿಯಲ್ಲಿ 11.2 ಲಕ್ಷ ಟನ್‌ ಪೆಟ್ರೋಲ್ ಮಾರಾಟ ಆಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಮಾರಟವು ಶೇ 12.1ರಷ್ಟು ಹೆಚ್ಚಾಗಿದೆ. ಡೀಸೆಲ್‌ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 7.4ರಷ್ಟು ಹೆಚ್ಚಾಗಿದ್ದು 30 ಲಕ್ಷ ಟನ್‌ಗಳಿಗೆ ತಲುಪಿದೆ. ಅಡುಗೆ ಅನಿಲ ಸಿಲಿಂಡರ್‌ ಮಾರಾಟವೂ ಶೇ 1.7ರಷ್ಟು ಇಳಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಾರ್ಚ್‌ 22 ರಿಂದ ಏಪ‍್ರಿಲ್‌ 6ರವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಲೀಟರಿಗೆ ₹ 10ರಷ್ಟು ಏರಿಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.