ADVERTISEMENT

ವಿಸ್ತಾರಾ ವಿಲೀನದ ಬಳಿಕ ಏರ್‌ ಇಂಡಿಯಾ ಹೆಸರಿನಲ್ಲೇ ಸೇವೆ: ಏರ್‌ ಇಂಡಿಯಾ ಸಿಇಒ

ಪಿಟಿಐ
Published 27 ಫೆಬ್ರುವರಿ 2023, 13:13 IST
Last Updated 27 ಫೆಬ್ರುವರಿ 2023, 13:13 IST
   

ನವದೆಹಲಿ : ವಿಸ್ತಾರಾ ಕಂಪನಿಯು ವಿಲೀನಗೊಂಡ ಬಳಿಕ ಏರ್ ಇಂಡಿಯಾ ಹೆಸರಿನಲ್ಲಿಯೇ ಪೂರ್ಣ ಪ್ರಮಾಣದ ವಿಮಾನಯಾನ ಸೇವೆಯು ಮುಂದುವರಿಯಲಿದೆ ಎಂದು ಏರ್‌ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ಸೋಮವಾರ ತಿಳಿಸಿದ್ದಾರೆ.

ಹೀಗಿದ್ದರೂ, ವಿಸ್ತಾರಾದಲ್ಲಿ ಇರುವ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಮೂಹದಲ್ಲಿ ಒಂದು ಪೂರ್ಣ ಪ್ರಮಾಣದ ಸೇವೆಗಳನ್ನು ನೀಡುವ ವಿಮಾನ ಮತ್ತು ಅಗ್ಗದ ದರದಲ್ಲಿ ಸೇವೆಗಳನ್ನು ಒದಗಿಸುವ ಇನ್ನೊಂದು ವಿಮಾನಯಾನ ಕಂಪನಿ ಹೊಂದುವ ಉದ್ದೇಶ ಇದೆ. ಏರ್‌ ಇಂಡಿಯಾ ಮತ್ತು ವಿಸ್ತಾರಾ ವಿಲೀನದ ಬಳಿಕ ಪೂರ್ಣ ಪ್ರಮಾಣದ ಸೇವೆ ನೀಡುವ ವಿಮಾನ ಕಂಪನಿಯು ರಚನೆ ಆಗಲಿದೆ ಎಂದು ವಿವರಿಸಿದ್ದಾರೆ.

ADVERTISEMENT

ದೇಶಿ ಮಾರುಕಟ್ಟೆಯಲ್ಲಿ ವಿಸ್ತಾರಾ ಹೆಚ್ಚು ಗುರುತಿಸಿಕೊಂಡಿದೆ. ಆದರೆ, ಜಾಗತಿಕ ಮಾರುಕಟ್ಟೆಯನ್ನು ಗಮನಿಸುವುದಾದರೆ, ಅಲ್ಲಿ ಏರ್‌ ಇಂಡಿಯಾ ಹೆಚ್ಚು ಜನಪ್ರಿಯವಾಗಿದ್ದು, 90 ವರ್ಷಗಳ ಇತಿಹಾಸ ಹೊಂದಿದೆ ಎಂದು ವಿಲ್ಸನ್‌ ಹೇಳಿದ್ದಾರೆ.

ವಿಸ್ತಾರಾವನ್ನು ಏರ್‌ ಇಂಡಿಯಾದೊಂದಿಗೆ ವಿಲೀನ ಮಾಡುವ ಕುರಿತು ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.