ADVERTISEMENT

ದೇಶದಲ್ಲಿ ಜಿಡಿಪಿ ಪ್ರಗತಿ ಶೇ 7ರಷ್ಟು ನಿರೀಕ್ಷೆ: ಸಿಇಎ ಅನಂತ ನಾಗೇಶ್ವರನ್‌

ಪಿಟಿಐ
Published 29 ಅಕ್ಟೋಬರ್ 2025, 14:09 IST
Last Updated 29 ಅಕ್ಟೋಬರ್ 2025, 14:09 IST
ಜಿಡಿಪಿ
ಜಿಡಿಪಿ   

ಮುಂಬೈ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7ಕ್ಕೆ ತಲುಪುವ ಸಾಧ್ಯತೆ ಇದೆ’ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್‌ ಹೇಳಿದ್ದಾರೆ.

ಮೂರು ಜಾಗತಿಕ ರೇಟಿಂಗ್‌ ಸಂಸ್ಥೆಗಳು ಇತ್ತೀಚೆಗೆ ದೇಶದ ರೇಟಿಂಗ್‌ ಹೆಚ್ಚಿಸಿವೆ. ದೇಶವು ಇದೇ ಪಥದಲ್ಲಿ ಮುಂದುವರಿದರೆ ಶೀಘ್ರ ‘ಎ’ ರೇಟಿಂಗ್‌ ವರ್ಗಕ್ಕೆ ಸೇರ್ಪಡೆ ಆಗಬಹುದು ಎಂದು ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತೆಗೆದುಕೊಂಡ ಕ್ರಮಗಳು ದೇಶದ ಆರ್ಥಿಕತೆಯನ್ನು ‘ಆರಾಮದಾಯಕ ಸ್ಥಾನದಲ್ಲಿ’ ಇರಿಸುತ್ತವೆ. ಆದಾಯ ತೆರಿಗೆ ವಿನಾಯಿತಿ ಮತ್ತು ಜಿಎಸ್‌ಟಿ ಇಳಿಕೆಯಂತಹ ಆರ್ಥಿಕ ಕ್ರಮಗಳು ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲಿವೆ ಎಂದು ಹೇಳಿದ್ದಾರೆ.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.3ಕ್ಕೆ ಇಳಿಕೆ ಆಗಬಹುದು ಎಂದು ಫೆಬ್ರುವರಿಯಲ್ಲಿ ಅನಂತ ನಾಗೇಶ್ವರನ್‌ ಹೇಳಿದ್ದರು. ಅಮೆರಿಕದ ಸುಂಕದಿಂದ ಜಿಡಿಪಿ ಶೇ 6ಕ್ಕೆ ಇಳಿಯುವ ನಿರೀಕ್ಷೆ ಇದೆ ಎಂದು ಹೇಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.