ADVERTISEMENT

‘ಮುಂದಿನ ವರ್ಷ ಶೇ 8.9ರಷ್ಟು ಪ್ರಗತಿ’

ಪಿಟಿಐ
Published 8 ಜನವರಿ 2021, 18:48 IST
Last Updated 8 ಜನವರಿ 2021, 18:48 IST
ಜಿಡಿಪಿ
ಜಿಡಿಪಿ   

ನವದೆಹಲಿ: 2021ರ ಏಪ್ರಿಲ್‌ನಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 8.9ರ ಪ್ರಗತಿಯೊಂದಿಗೆ ಪುಟಿದೇಳಲಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆಯು ಅಂದಾಜಿಸಿದೆ. ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಗಣನೀಯ ಚೇತರಿಕೆಕಂಡಿರುವ ಕಾರಣ ಮುಂದಿನ ಆರ್ಥಿಕ ವರ್ಷದಲ್ಲಿ ಈ ಮಟ್ಟದ ಪ್ರಗತಿ ಸಾಧ್ಯವಾಗಲಿದೆ ಎಂದು ಅದು ಹೇಳಿದೆ.

‘ಭಾರತದ ಅರ್ಥ ವ್ಯವಸ್ಥೆಯು 2020ರಲ್ಲಿ ಅತ್ಯಂತ ದೊಡ್ಡ ಹಿನ್ನಡೆ ಕಂಡಿದೆ. ಮಾರ್ಚ್‌ನಿಂದ ಆಗಸ್ಟ್‌ ಅವಧಿಯಲ್ಲಿ ಆರ್ಥಿಕತೆಯು ಅತೀ ಹೆಚ್ಚುಕುಗ್ಗಿದೆ. ಆದರೆ, ಸೆಪ್ಟೆಂಬರ್‌ ನಂತರ ಆರ್ಥಿಕ ಚಟುವಟಿಕೆ ಗಳು ಚೇತರಿಸಿಕೊಂಡಿವೆ’ ಎಂದು ಸಂಸ್ಥೆ ಹೇಳಿದೆ.

ಮಾರ್ಚ್‌ಗೆ ಕೊನೆಯಾಗಲಿರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇ 7.7ರಷ್ಟು ಕುಗ್ಗಲಿದೆ. ಇದು ನಾಲ್ಕು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಸ್ಥಿತಿ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಘಟನೆಯು (ಎನ್‌ಎಸ್‌ಒ) ಗುರುವಾರ ಹೇಳಿತ್ತು.

ADVERTISEMENT

ತಯಾರಿಕಾ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಕಾಣಿಸಿದೆ. ಕೋವಿಡ್‌–19 ತಡೆಗಾಗಿ ವಿಧಿಸಲಾಗಿದ್ದ ನಿರ್ಬಂಧಗಳ ತೆರವಿನ ಬಳಿಕ ಡಿಸೆಂಬರ್‌ನಲ್ಲಿ ಕಾರ್ಖಾನೆಗಳಿಗೆ ಸರಕು ಪೂರೈಕೆಗಾಗಿ ಹೆಚ್ಚಿನ ಬೇಡಿಕೆಗಳು ಬರುತ್ತಿವೆ. ಬೇಡಿಕೆ ಹೆಚ್ಚಳವಾಗಿದ್ದು, ಮಾರುಕಟ್ಟೆ ಸ್ಥಿತಿ ಉತ್ತಮಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.