ನ್ಮೋಲ್ ಸಿಂಗ್ ಜಗ್ಗಿ ಮತ್ತು ಪುನೀತ್ ಸಿಂಗ್ ಜಗ್ಗಿ
ನವದೆಹಲಿ: ಜೆನ್ಸೋಲ್ ಎಂಜಿನಿಯರಿಂಗ್ ಕಂಪನಿಯ ಪ್ರವರ್ತಕರಾದ ಅನ್ಮೋಲ್ ಸಿಂಗ್ ಜಗ್ಗಿ ಮತ್ತು ಪುನೀತ್ ಸಿಂಗ್ ಜಗ್ಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಅನ್ಮೋಲ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಪುನೀತ್ ಪೂರ್ಣಕಾಲಿಕ ನಿರ್ದೇಶಕರಾಗಿದ್ದರು.
ಇವರಿಬ್ಬರು ಕಂಪನಿಯ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜೆನ್ಸೋಲ್‌ನ ಪ್ರವರ್ತಕರು ಕಂಪನಿಯ ಹಣವನ್ನು ವೈಯಕ್ತಿಕ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದು, ಆರ್ಥಿಕ ಅವ್ಯವಹಾರ ನಡೆಸಿದ್ದಾರೆ ಎಂದು ಇವರನ್ನು ಏಪ್ರಿಲ್‌ನಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಷೇರುಪೇಟೆ ವಹಿವಾಟಿನಿಂದ ನಿಷೇಧಿಸಿತ್ತು. ಇದೀಗ ಸೆಬಿ ಮಧ್ಯಂತರ ಆದೇಶದಂತೆ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.