ADVERTISEMENT

ಗೋವಾದಲ್ಲಿ ‘ಜಿಂಜರ್’ ಹೋಟೆಲ್‌

ಸಚ್ಚಿದಾನಂದ ಕುರಗುಂದ
Published 11 ಡಿಸೆಂಬರ್ 2018, 17:09 IST
Last Updated 11 ಡಿಸೆಂಬರ್ 2018, 17:09 IST
‘ಜಿಂಜರ್‌’ ಹೋಟೆಲ್‌ ಕೊಠಡಿಯ ಒಳ ಆವರಣ
‘ಜಿಂಜರ್‌’ ಹೋಟೆಲ್‌ ಕೊಠಡಿಯ ಒಳ ಆವರಣ   

ಪಣಜಿ: ಆತಿಥ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಜಿಂಜರ್‌’ ಹೋಟೆಲ್‌ ಈಗ ಗೋವಾದಲ್ಲಿ ಕಾರ್ಯಾರಂಭ ಮಾಡಿದೆ.

ನವೀಕರಣಗೊಂಡಿರುವ, ಸುಸಜ್ಜಿತ ಹಾಗೂ ಆಧುನಿಕ ಸ್ಪರ್ಶದೊಂದಿಗೆ ‘ಜಿಂಜರ್‌’ ಹೋಟೆಲ್‌ ಅನ್ನು ಇಲ್ಲಿ ಆರಂಭಿಸಲಾಗಿದೆ.
ಪ್ರವಾಸಿಗರ ಪಾಲಿಗೆ ಅತ್ಯಂತ ಆಕರ್ಷಕ ತಾಣವಾಗಿರುವ ಗೋವಾಕ್ಕೆ ದೇಶ ಮತ್ತು ವಿದೇಶಗಳ ಪ್ರವಾಸಿಗರು ಬರುತ್ತಾರೆ. ಹೀಗಾಗಿ, 110 ಕೊಠಡಿಗಳಿರುವ ಈ ಹೋಟೆಲ್‌, ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಆತಿಥ್ಯ ನೀಡಲಿದೆ.

‘ಜಿಂಜರ್‌ ಸಮೂಹದ 46ನೇ ಹೋಟೆಲ್‌ ಇದಾಗಿದೆ. ಜಾಗತಿಕ ಮತ್ತು ಸ್ಥಳೀಯರು ಸೇರಿದಂತೆ ಎಲ್ಲ ವರ್ಗದ ಗ್ರಾಹಕರ ಆಶಯಗಳನ್ನು ಈಡೇರಿಸುವ ಉದ್ದೇಶವನ್ನು ಇದು ಹೊಂದಿದೆ. ಸಂಸ್ಥೆಯ ಈ ಹೋಟೆಲ್‌ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವೂ ಆಗಲಿದೆ’ ಎಂದು ಇಂಡಿಯನ್‌ ಹೋಟೆಲ್ಸ್‌ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪುನೀತ್‌ ಚಾತ್ವಾಲ್‌ ತಿಳಿಸಿದ್ದಾರೆ.

ADVERTISEMENT

‘ಗ್ರಾಹಕರಿಗೆ ಕೈಗೆಟುಕುವ ದರದಲ್ಲೇ ಅತ್ಯುತ್ತಮ ಸೇವೆ ಒದಗಿಸುವುದು ಜಿಂಜರ್‌ ಉದ್ದೇಶವಾಗಿದೆ. ಮರುವಿನ್ಯಾಸಗೊಂಡಿರುವ ಈ ಹೋಟೆಲ್‌ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ರುಚಿಕರ, ವೈವಿಧ್ಯಮಯ ಆಹಾರ ಹಾಗೂ ಉತ್ತಮ ಸೇವೆ ಒದಗಿಸುವುದು ಇಲ್ಲಿನ ವಿಶೇಷ’ ಎಂದು ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕಿ ದೀಪಿಕಾ ರಾವ್ ತಿಳಿಸಿದ್ದಾರೆ.

‘ಜಿಂಜರ್‌ ಸಮೂಹವನ್ನು ವಿಸ್ತರಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಕೆಲವೇ ತಿಂಗಳಲ್ಲಿ 6 ಹೊಸ ಹೋಟೆಲ್‌ಗಳು ದೇಶದ ವಿವಿಧೆಡೆ ಆರಂಭವಾಗಲಿವೆ’ ಎಂದಿದ್ದಾರೆ.

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಪಣಜಿಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.