ADVERTISEMENT

ಐಪಿಒ ಅರ್ಜಿ ಸಲ್ಲಿಸಿದ ಗೋ ಡಿಜಿಟಲ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 16:20 IST
Last Updated 17 ಆಗಸ್ಟ್ 2022, 16:20 IST

ಬೆಂಗಳೂರು: ಬೆಂಗಳೂರು ಮೂಲದ ಗೋ ಡಿಜಿಟ್ ಇನ್ಶುರೆನ್ಸ್ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿದೆ.

ಐಪಿಒ ಸಂದರ್ಭದಲ್ಲಿ ಶೇಕಡ 10ರಷ್ಟು ಷೇರುಗಳು ಸಣ್ಣ ಹೂಡಿಕೆದಾರರಿಗೆ ಮೀಸಲಾಗಿ ಇರಲಿವೆ. ಶೇ 75ರಷ್ಟು ಷೇರುಗಳು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿ ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

ಐಪಿಒ ಮೂಲಕ ₹ 1,250 ಕೋಟಿ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ಗೋ ಡಿಜಿಟ್ ಕಂಪನಿಯು ವಾಹನ ವಿಮೆ, ಆರೋಗ್ಯ, ಪ್ರಯಾಣ, ಆಸ್ತಿ ವಿಮೆ ಸೇರಿದಂತೆ ಹಲವು ವಿಮಾ ಸೇವೆಗಳನ್ನು ಒದಗಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.