ADVERTISEMENT

ಲಾಭ ಗಳಿಕೆ ವಹಿವಾಟು: ಚಿನ್ನದ ದರ ₹14 ಸಾವಿರ, ಬೆಳ್ಳಿಯ ದರ ₹20 ಸಾವಿರ ಇಳಿಕೆ

ಪಿಟಿಐ
Published 30 ಜನವರಿ 2026, 15:33 IST
Last Updated 30 ಜನವರಿ 2026, 15:33 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಗಗನಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರವು ಶುಕ್ರವಾರ ಇಳಿಕೆ ಕಂಡಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನದ ದರವು 10 ಗ್ರಾಂಗೆ ₹14 ಸಾವಿರದಷ್ಟು, ಬೆಳ್ಳಿಯ ದರವು ಕೆ.ಜಿ.ಗೆ ₹20 ಸಾವಿರದಷ್ಟು ಇಳಿಕೆ ಆಗಿದೆ.

ADVERTISEMENT

ಅಮೆರಿಕದ ಡಾಲರ್‌ ಮೌಲ್ಯದಲ್ಲಿ ಹೆಚ್ಚಳ ಹಾಗೂ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಚಿನ್ನ ಮತ್ತು ಬೆಳ್ಳಿಯನ್ನು ಮಾರಾಟ ಮಾಡಿದ್ದುದು ಈ ಇಳಿಕೆಗೆ ಕಾರಣ ಎಂದು ವರ್ತಕರು ಹೇಳಿದ್ದಾರೆ.

ಚಿನ್ನದ ಬೆಲೆಯು ಶೇ 7.65ರಷ್ಟು ಕುಸಿದು ₹1.69 ಲಕ್ಷಕ್ಕೆ ತಲುಪಿದೆ. ಬೆಳ್ಳಿಯ ಬೆಲೆಯು ಸರಿಸುಮಾರು ಶೇ 5ರಷ್ಟು ಕಡಿಮೆ ಆಗಿದ್ದು ₹3,84,500ಕ್ಕೆ ತಲುಪಿದೆ. ‘ಈಚಿನ ದಿನಗಳಲ್ಲಿ ಚಿನ್ನ, ಬೆಳ್ಳಿಯ ಬೆಲೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಹೀಗಾಗಿ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಚಿನ್ನ, ಬೆಳ್ಳಿ ಮಾರಾಟ ಮಾಡಿದರು’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕು ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

‘ದೊಡ್ಡ ಸಾಂಸ್ಥಿಕ ಹೂಡಿಕೆದಾರರು ಚಿನ್ನ, ಬೆಳ್ಳಿಯ ನಗದೀಕರಣಕ್ಕೆ ಮುಂದಾಗಿದ್ದುದು ಈ ಬೆಲೆ ಇಳಿಕೆಗೆ ಕಾರಣ’ ಎಂದು ಗಾಂಧಿ ಹೇಳಿದ್ದಾರೆ. ಅಮೆರಿಕದ ಡಾಲರ್‌ ಮೌಲ್ಯವು ಸುಧಾರಿಸಿಕೊಂಡಿದ್ದುದು ಕೂಡ ಚಿನ್ನ, ಬೆಳ್ಳಿಯ ಬೆಲೆ ಇಳಿಕೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.