ADVERTISEMENT

ಚಿನ್ನದ ದರ ₹330, ಬೆಳ್ಳಿ ₹840 ಏರಿಕೆ

ಪಿಟಿಐ
Published 12 ಏಪ್ರಿಲ್ 2023, 10:30 IST
Last Updated 12 ಏಪ್ರಿಲ್ 2023, 10:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಚಿಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ, ಬೆಳ್ಳಿ ದರ ಹೆಚ್ಚಾಗಿದೆ. ಚಿನ್ನದ ದರ 10 ಗ್ರಾಂಗೆ ₹330ರಷ್ಟು ಹೆಚ್ಚಾಗಿ ₹61,080ರಂತೆ ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹840ರಷ್ಟು ಏರಿಕೆ ಕಂಡು ₹75,780ಕ್ಕೆ ತಲುಪಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಆಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪ್ರಭಾವ ಕಂಡುಬಂದಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ (28.34 ಗ್ರಾಂ) 2,011 ಡಾಲರ್‌ ಮತ್ತು ಬೆಳ್ಳಿ ದರ ಔನ್ಸ್‌ಗೆ 25.17 ಡಾಲರ್‌ನಂತೆ ಮಾರಾಟ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.