ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಬುಧವಾರ ಇಳಿಕೆಯ ಹಾದಿ ಹಿಡಿದವು. 10ಗ್ರಾಂ ಚಿನ್ನ ₹650ರಷ್ಟು ಇಳಿಕೆ ಕಂಡು ₹ 54,260ಕ್ಕೆ ಮಾರಾಟವಾಯಿತು. ಬೆಳ್ಳಿ ದರವು ಕೆ.ಜಿ.ಗೆ ₹ 3,112ರಂತೆ ಇಳಿಕೆಯಾಗಿ ₹ 72,562ರಂತೆ ಮಾರಾಟವಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆ ಆಗಿರುವುದೇ ದೇಶಿ ಮಾರುಕಟ್ಟೆಯಲ್ಲಿನ ಇಳಿಕೆಗೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.