ADVERTISEMENT

ಚಿನ್ನದ ದರ ₹ 305ರಷ್ಟು ಇಳಿಕೆ

ಪಿಟಿಐ
Published 20 ಏಪ್ರಿಲ್ 2021, 14:06 IST
Last Updated 20 ಏಪ್ರಿಲ್ 2021, 14:06 IST

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ ₹ 305ರಷ್ಟು ಇಳಿಕೆ ಕಂಡು ₹ 46,756ರಂತೆ ಮಾರಾಟವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ ಆಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಉಂಟಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಬೆಳ್ಳಿ ಧಾರಣೆ ಕೆ.ಜಿ.ಗೆ ₹ 113ರಷ್ಟು ಇಳಿಕೆ ಕಂಡು ₹ 67,810ಕ್ಕೆ ತಲುಪಿತು.

ADVERTISEMENT

ಈಚೆಗೆ ಇಳಿಮುಖವಾಗಿದ್ದ ಅಮೆರಿಕದ ಬಾಂಡ್‌ ಗಳಿಕೆಯು ಮತ್ತೆ ಚೇತರಿಕೆ ಕಂಡುಕೊಂಡಿದ್ದರಿಂದ ಚಿನ್ನದ ಬೆಲೆಯು ಒತ್ತಡಕ್ಕೆ ಒಳಗಾಗಿ ವಹಿವಾಟು ನಡೆಸಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.