ADVERTISEMENT

ಚಿನ್ನದ ಬೇಡಿಕೆ ಶೇ 5ರಷ್ಟು ಹೆಚ್ಚಳ

ಪಿಟಿಐ
Published 5 ಫೆಬ್ರುವರಿ 2025, 15:53 IST
Last Updated 5 ಫೆಬ್ರುವರಿ 2025, 15:53 IST
<div class="paragraphs"><p>ಚಿನ್ನ</p></div>

ಚಿನ್ನ

   

ಮುಂಬೈ: ಕಳೆದ ವರ್ಷ ದೇಶದಲ್ಲಿ ಚಿನ್ನದ ಬೇಡಿಕೆಯು ಶೇ 5ರಷ್ಟು ಹೆಚ್ಚಳವಾಗಿದೆ. ಒಟ್ಟು ಬೇಡಿಕೆ 802.8 ಟನ್‌ ಆಗಿದ್ದು, ಇದರ ಮೌಲ್ಯವು ₹5.15 ಲಕ್ಷ ಕೋಟಿ ಆಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ತಿಳಿಸಿದೆ.

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನದ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಕಡಿತಗೊಳಿಸಿತ್ತು. ಅಲ್ಲದೆ, ಮದುವೆ ಮತ್ತು ಹಬ್ಬದ ಋತುವಿನಲ್ಲಿ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚಿತ್ತು. ಇದರಿಂದ ಬೇಡಿಕೆ ಹೆಚ್ಚಳವಾಗಿದೆ. ಪ್ರಸಕ್ತ ವರ್ಷದಲ್ಲಿ ಬೇಡಿಕೆಯು 700 ಟನ್‌ನಿಂದ 800 ಟನ್‌ಗೆ ಮುಟ್ಟುವ ನಿರೀಕ್ಷೆಯಿದೆ ಎಂದು ಬುಧವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

ADVERTISEMENT

2023ರಲ್ಲಿ 761 ಟನ್‌ ಚಿನ್ನಕ್ಕೆ ಬೇಡಿಕೆ ಬಂದಿದ್ದು, ಇದರ ಒಟ್ಟು ಮೌಲ್ಯ ₹3.92 ಲಕ್ಷ ಕೋಟಿ ಆಗಿದೆ.

‘ಮದುವೆ ಋತುವಿನಲ್ಲಿ ಹಳದಿ ಲೋಹದ ಖರೀದಿಯು ಚೇತರಿಕೆ ಕಾಣುವ ನಿರೀಕ್ಷೆಯಿದೆ. ಒಂದು ಹಂತಕ್ಕೆ ಬೆಲೆ ಕೂಡ ಸ್ಥಿರಗೊಳ್ಳುವ ನಿರೀಕ್ಷೆಯಿದೆ’ ಎಂದು ಸಮಿತಿಯ ಭಾರತದ ಸಿಇಒ ಸಚಿನ್‌ ಜೈನ್‌ ತಿಳಿಸಿದ್ದಾರೆ.

ಕಳೆದ ವರ್ಷ ಚಿನ್ನದ ಬೆಲೆಯು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರಸಕ್ತ ವರ್ಷವೂ ದರ ಏರಿಕೆ ಮುಂದುವರಿದಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.