ADVERTISEMENT

ಚಿನ್ನದ ಇಟಿಎಫ್‌: 2021ರಲ್ಲಿ ₹ 4,814 ಕೋಟಿ ಒಳಹರಿವು

ಪಿಟಿಐ
Published 6 ಫೆಬ್ರುವರಿ 2022, 14:51 IST
Last Updated 6 ಫೆಬ್ರುವರಿ 2022, 14:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳು (ಇಟಿಎಫ್‌) 2020ಕ್ಕೆ ಹೋಲಿಸಿದರೆ 2021ರಲ್ಲಿ ಕಡಿಮೆ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಿವೆ. 2021ರಲ್ಲಿ ₹ 4,814 ಕೋಟಿ ಬಂಡವಾಳ ಆಕರ್ಷಿಸಿವೆ. 2020ರಲ್ಲಿ ₹ 6,657 ಕೋಟಿ ಬಂಡವಾಳ ಇವುಗಳತ್ತ ಹರಿದುಬಂದಿತ್ತು.

ಜಾಗತಿಕ ಮಾರುಕಟ್ಟೆಯ ಚೇತರಿಕೆ ಮತ್ತು ಹೂಡಿಕೆದಾರರ ಭಾವನೆಯಲ್ಲಿ ಕಂಡುಬಂದ ಚೇತರಿಕೆಯಿಂದಾಗಿ 2021ರಲ್ಲಿ ಚಿನ್ನದ ಇಟಿಎಫ್‌ನಲ್ಲಿ ಬಂಡವಾಳ ಹರಿವು ಕಡಿಮೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್ಐ) ತಿಳಿಸಿದೆ.

ಚಿನ್ನದ ಇಟಿಎಫ್‌ನ ನಿರ್ವಹಣಾ ಸಂಪತ್ತು ಮೌಲ್ಯವು ಡಿಸೆಂಬರ್‌ ಅಂತ್ಯಕ್ಕೆ ₹ 18,405 ಕೋಟಿಗೆ ತಲುಪಿದೆ. 2020ರಲ್ಲಿ ಇದ್ದ ₹ 14,174 ಕೋಟಿಗೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳ ಕಂಡುಬಂದಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ, ಸವಾಲಿನ ಹೂಡಿಕೆಯ ವಾತಾವರಣದ ಸಂದರ್ಭದಲ್ಲಿ, ಚಿನ್ನವು ಉತ್ತಮವಾಗಿ ಕಾರ್ಯನಿರ್ವಹಿಸುವ ಆಸ್ತಿ ವರ್ಗಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.