ADVERTISEMENT

ಚಿನ್ನದ ವಿನಿಮಯ ನೀತಿ: ಮಲಬಾರ್‌ ಗೋಲ್ಡ್‌ ಸ್ವಾಗತ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 16:57 IST
Last Updated 2 ಅಕ್ಟೋಬರ್ 2021, 16:57 IST
ಅಹ್ಮದ್
ಅಹ್ಮದ್   

ಬೆಂಗಳೂರು: ದೇಶದಲ್ಲಿ ಚಿನ್ನದ ವಿನಿಮಯಕ್ಕಾಗಿ ಒಂದು ನೀತಿಯನ್ನು ರೂಪಿಸಲು ನಿರ್ಧರಿಸಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿರ್ಧಾರವನ್ನು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಅಧ್ಯಕ್ಷ ಎಂ.ಪಿ. ಅಹ್ಮದ್ ಸ್ವಾಗತಿಸಿದ್ದಾರೆ.

ಸೆಬಿಯ ಅನುಮೋದನೆಯಿಂದ ಪಾರದರ್ಶಕ ಬೆಲೆ, ಹೂಡಿಕೆಯ ದ್ರವ್ಯತೆ ಮತ್ತು ಚಿನ್ನದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಗ್ರಾಹಕರು ಗುಣಮಟ್ಟದ ಭರವಸೆ ಪಡೆಯುವುದರಿಂದ ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ನಿರೀಕ್ಷಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮಲಬಾರ್‌, ಈಗಾಗಲೇ ಒಂದು ಭಾರತ, ಒಂದು ಚಿನ್ನದ ಬೆಲೆ ಹಾಗೂ ತನ್ನ ಎಲ್ಲಾ ರೀಟೇಲ್‌ ಮಳಿಗೆಗಳಲ್ಲಿಯೂ 2020ರಿಂದಲೇ ನೂರಕ್ಕೆ ನೂರರಷ್ಟು ಪರಿಶುದ್ಧವಾದ ಹಾಲ್‌ಮಾರ್ಕ್‌ನ ಚಿನ್ನದ ಒಂದೇ ರೀತಿಯ ಬೆಲೆಯನ್ನು ನಿಗದಿ ಮಾಡುತ್ತಿದೆ ಎಂದು ತಿಳಿಸಿದರು.

ADVERTISEMENT

ಚಿನ್ನದ ವ್ಯಾಪಾರದಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಸೆಬಿ ವ್ಯಕ್ತಪಡಿಸಿದೆ. ಈ ಉದ್ದೇಶ ಸಾಧಿಸಲು ಅನಧಿಕೃತ ಆಭರಣ ತಯಾರಿಕೆ ತಡೆಯುವುದು ಅಗತ್ಯ. ಕಸ್ಟಮ್ಸ್‌ ಸುಂಕವನ್ನೂ ಕಡಿಮೆ ಮಾಡುವ ಮೂಲಕ ಚಿನ್ನದ ಕಳ್ಳಸಾಗಣೆ ತಡೆಯಬಹುದಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.