ADVERTISEMENT

ಬೆಂಗಳೂರು: ₹75 ಸಾವಿರ ದಾಟಿ‌ದ ಚಿನ್ನದ ದರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 14:40 IST
Last Updated 12 ಏಪ್ರಿಲ್ 2024, 14:40 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ/ ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ಅಲ್ಪ ಇಳಿಕೆ ಕಂಡಿದ್ದ ಚಿನ್ನದ ಧಾರಣೆಯು ಶುಕ್ರವಾರ ಮತ್ತೆ ಏರಿಕೆ ಕಂಡಿದೆ.

10 ಗ್ರಾಂ ಚಿನ್ನದ ಬೆಲೆಯು ₹75,180ಕ್ಕೆ ತಲುಪಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹85,700ಕ್ಕೆ ಮುಟ್ಟಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹73,910 ಇದ್ದರೆ, ಬೆಳ್ಳಿ ಕೆ.ಜಿಗೆ ₹84,600 ಆಗಿತ್ತು.

ADVERTISEMENT

ನವದೆಹಲಿಯಲ್ಲೂ ಏರಿಕೆ: ನವದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರವು ₹1,050 ಏರಿಕೆಯಾಗಿ ₹73 ಸಾವಿರದಂತೆ ಮಾರಾಟವಾಗಿದೆ. ಒಂದು ಕೆ.ಜಿ ಬೆಳ್ಳಿಗೆ 1,400 ಹೆಚ್ಚಳವಾಗಿ, ₹86,300ಕ್ಕೆ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,388 ಡಾಲರ್‌ (ಅಂದಾಜು ₹1.99 ಲಕ್ಷ) ಮತ್ತು 28.95 (ಅಂದಾಜು ₹2,419) ಡಾಲರ್‌ನಂತೆ ಮಾರಾಟವಾಗಿದೆ. 

‘ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಗಮನಹರಿಸಿದ್ದಾರೆ. ಹಾಗಾಗಿ, ಹಳದಿ ಲೋಹದ ಬೆಲೆಯು ಏರುಗತಿಯಲ್ಲಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೌಮಿಲ್‌ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.