ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಅಕ್ಟೋಬರ್ ಅವಧಿಯಲ್ಲಿ ಚಿನ್ನದ ಆಮದು
ಶೇ 9ರಷ್ಟು ಇಳಿಕೆ ಕಂಡಿದ್ದು, ಒಟ್ಟಾರೆ ₹ 1.25 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿದೆ.
2018–19ರ ಇದೇ ಅವಧಿಯಲ್ಲಿ ₹ 1.39 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.
ಚಿನ್ನದ ಆಮದು ಇಳಿಕೆಯಿಂದಾಗಿ ವ್ಯಾಪಾರ ಕೊರತೆ ಅಂತರ ₹ 8.36 ಲಕ್ಷ ಕೋಟಿಗಳಿಂದ ₹ 6.81 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.