ADVERTISEMENT

ಚಿನ್ನ ₹ 905, ಬೆಳ್ಳಿ ₹ 3,347 ಹೆಚ್ಚಳ

ಪಿಟಿಐ
Published 27 ಜುಲೈ 2020, 14:10 IST
Last Updated 27 ಜುಲೈ 2020, 14:10 IST
ಚಿನ್ನ
ಚಿನ್ನ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ಧಾರಣೆ 10 ಗ್ರಾಂಗೆ ₹ 905ರಂತೆ ಹೆಚ್ಚಾಗಿ ₹ 52,960ಕ್ಕೆ ತಲುಪಿದೆ. ಬೆಳ್ಳಿ ದರ ₹3,347ರಂತೆ ಹೆಚ್ಚಾಗಿ ಕೆ.ಜಿಗೆ ₹ 65,670ಕ್ಕೆ ಏರಿಕೆಯಾಗಿದೆ.

ಮುಂಬೈನಲ್ಲಿ 10 ಗ್ರಾಂ ಚಿನ್ನದ ದರ ₹ 51,125 ಇದ್ದು, ಬೆಳ್ಳಿ ಕೆ.ಜಿಗೆ ₹ 64,505ರಂತೆ ಮಾರಾಟವಾಗಿದೆ. ಬೆಂಗಳೂರನಲ್ಲಿ 10 ಗ್ರಾಂ ಚಿನ್ನ ₹52,180ರಂತೆ ಹಾಗೂ ಕೆ.ಜಿ ಬೆಳ್ಳಿ ₹ 64,300ರಂತೆ ಮಾರಾಟವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಏರಿಕೆಯೇ ಇದಕ್ಕೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ (28.34 ಗ್ರಾಂ) 1,935 ಡಾಲರ್‌‌ಗೆ ತಲುಪಿದೆ.

ADVERTISEMENT

ಆರ್ಥಿಕತೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದು ಹಾಗೂ ಅಮೆರಿಕ–ಚೀನಾ ಸಂಘರ್ಷವು ಹೂಡಿಕೆದಾರರು ಚಿನ್ನ ಖರೀದಿಸುವಂತೆ ಮಾಡಿದೆ. ಇದರಿಂದಾಗಿ ಬೆಲೆ ಹೆಚ್ಚಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.