ADVERTISEMENT

ಅಕ್ಷಯ ತೃತೀಯ | ಚಿನ್ನದ ದರ ₹900 ಇಳಿಕೆ; ಬೆಳ್ಳಿ ₹4 ಸಾವಿರ ಕುಸಿತ

ಪಿಟಿಐ
Published 30 ಏಪ್ರಿಲ್ 2025, 13:09 IST
Last Updated 30 ಏಪ್ರಿಲ್ 2025, 13:09 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.

ಬೆಳ್ಳಿ ದರವು ಕೆ.ಜಿಗೆ ₹4 ಸಾವಿರ ಇಳಿಕೆಯಾಗಿದ್ದು, ₹98 ಸಾವಿರ ಆಗಿದೆ.

ADVERTISEMENT

10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹900 ಕಡಿಮೆಯಾಗಿದ್ದು, ₹98,550ರಂತೆ ಮಾರಾಟವಾಗಿದೆ. ಆಭರಣ ಚಿನ್ನದ ದರವು (ಶೇ 99.5 ಪರಿಶುದ್ಧತೆ) ಇಷ್ಟೇ ಪ್ರಮಾಣದಲ್ಲಿ ಇಳಿಕೆಯಾಗಿ, ₹98,100 ಆಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ತಿಳಿಸಿದೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಟೊ ವಲಯದ ಮೇಲಿನ ಆಮದು ಸುಂಕ ಕಡಿಮೆ ಮಾಡುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಮತ್ತೊಂದೆಡೆ ಭಾರತ ಸೇರಿ ಹಲವು ರಾಷ್ಟ್ರಗಳ ಜೊತೆ ದ್ವಿಪಕ್ಷೀಯ ವ್ಯಾಪಾರ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಇದು ಚಿನ್ನದ ದರ ಇಳಿಕೆಗೆ ಕಾರಣವಾಗಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಸರಕು ವಿಭಾಗದ ಸಂಶೋಧನಾ ವಿಶ್ಲೇಷಕಿ ಕಯ್ನಾತ್ ಚೈನ್ವಾಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.