ADVERTISEMENT

Gold Rate: ಚಿನ್ನದ ಬೆಲೆ ಈ ವಾರವೂ ಏರುವ ಸಾಧ್ಯತೆ

ಪಿಟಿಐ
Published 18 ಜನವರಿ 2026, 16:10 IST
Last Updated 18 ಜನವರಿ 2026, 16:10 IST
ಚಿನ್ನದ ದರ
ಚಿನ್ನದ ದರ   

ನವದೆಹಲಿ: ಚಿನ್ನದ ಬೆಲೆಯು ಈ ವಾರದಲ್ಲಿಯೂ ಏರುಗತಿಯಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಆದರೆ ಬೆಳ್ಳಿಯ ಬೆಲೆಯು ಇದುವರೆಗಿನ ಏರುಗತಿಯನ್ನು ಮುಂದುವರಿಸಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

‘ಹೂಡಿಕೆದಾರರು ಚೀನಾದ ಆರ್ಥಿಕ ಅಂಕಿ–ಅಂಶಗಳ ಮೇಲೆ ಗಮನ ನೀಡಲಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಮಾಡುವ ಭಾಷಣ, ಅಮೆರಿಕವು ವಿವಿಧ ದೇಶಗಳ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕದ ಬಗ್ಗೆ ಅಲ್ಲಿನ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ಹೂಡಿಕೆದಾರರ ಪಾಲಿಗೆ ಮಹತ್ವದ್ದಾಗಲಿವೆ’ ಎಂದು ಜೆಎಂ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌ನ ತಜ್ಞ ಪ್ರಣವ್ ಮೆರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT