ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ, ಬೆಳ್ಳಿ ಧಾರಣೆ ಇಳಿಕೆ ಕಂಡಿದೆ.
10 ಗ್ರಾಂ ಚಿನ್ನದ ದರ ₹ 488ರಂತೆ ಇಳಿಕೆಯಾಗಿ ₹ 49,135ಕ್ಕೆ ತಲುಪಿದೆ. ಬುಧವಾರ ₹ 49,623 ಇತ್ತು.ಬೆಳ್ಳಿ ಬೆಲೆಯೂ ಕೆ.ಜಿಗೆ ₹ 1,168ರಂತೆ ಕಡಿಮೆಯಾಗಿ ₹ 50,326ಕ್ಕೆ ತಲುಪಿದೆ. ಬುಧವಾರ₹ 51,494 ಇತ್ತು.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿಯಾಗಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.
ರೂಪಾಯಿ ಬೆಲೆ: ರೂಪಾಯಿ ಬೆಲೆಯು 56 ಪೈಸೆಗಳಷ್ಟು ಏರಿಕೆ ದಾಖಲಿಸಿ ಮೂರು ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ (₹ 75.04) ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.