ನವದೆಹಲಿ: ದೇಶದಾದ್ಯಂತ ಚಿನ್ನ ಬೆಳ್ಳಿ ಧಾರಣೆ ಏರಿಕೆ ಕಂಡಿದ್ದು, ದೆಹಲಿಯಲ್ಲಿ10ಗ್ರಾಂ ಚಿನ್ನದ ದರ ₹ 50 ಸಾವಿರದ ಸಮೀಪಕ್ಕೆ ಬಂದಿದೆ.
ಬುಧವಾರ ₹ 647ರಂತೆ ಹೆಚ್ಚಳವಾಗಿ ₹ 49,908ರಂತೆ ಮಾರಾಟವಾಗಿದೆ.
10ಗ್ರಾಂ ಚಿನ್ನದ ಧಾರಣೆಬೆಂಗಳೂರಿನಲ್ಲಿ ₹342ರಂತೆ, ಮುಂಬೈನಲ್ಲಿ ₹ 325ರಂತೆ ಹೆಚ್ಚಾಗಿದ್ದು, ಕ್ರಮವಾಗಿ 48,985 ಮತ್ತು ₹ 48,690ಕ್ಕೆ ತಲುಪಿದೆ.
ಬೆಳ್ಳಿ ಧಾರಣೆ ದೆಹಲಿಯಲ್ಲಿ ಕೆ.ಜಿಗೆ ₹ 1,611ರಂತೆ ಜಿಗಿತ ಕಂಡು ₹ 51,870ಕ್ಕೆ ತಲುಪಿದೆ.ಬೆಂಗಳೂರಿನಲ್ಲಿ ₹1,100ರಂತೆ ಹೆಚ್ಚಾಗಿ ₹ 50,200ರಂತೆ ಮಾರಾಟವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.