ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ದರ ಏರಿಕೆಯಾಗಿದೆ. ಮಂಗಳವಾರ ಚಿನ್ನದ ದರ 10ಗ್ರಾಂಗೆ ₹ 1,182ರಂತೆ ಹೆಚ್ಚಾಗಿ ₹ 54,856ರಂತೆ ಮಾರಾಟವಾಗಿದೆ.
ಬೆಳ್ಳಿ ಧಾರಣೆ ₹ 1,587ರಂತೆ ಹೆಚ್ಚಾಗಿ ಕೆ.ಜಿಗೆ ₹ 72,547ಕ್ಕೆ ತಲುಪಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ ಆಗಿರುವುದೇ ದೇಶದಲ್ಲಿಯೂ ದರ ಏರಿಕೆಗೆ ಕಾರಣವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.