ADVERTISEMENT

ಲಸಿಕೆ ಮೇಲಿನ ತೆರಿಗೆ: ಜೂನ್‌ 8ಕ್ಕೆ ಸಮಿತಿ ವರದಿ

ಪಿಟಿಐ
Published 29 ಮೇ 2021, 17:09 IST
Last Updated 29 ಮೇ 2021, 17:09 IST
   

ನವದೆಹಲಿ: ಕೋವಿಡ್‌ ಲಸಿಕೆ, ಔಷಧಗಳು, ಸ್ಯಾನಿಟೈಸರ್, ಮುಖಗವಸು, ಪಿಪಿಇ ಕಿಟ್‌ ಮತ್ತು ಆಮ್ಲಜನಕ ಸಿಲಿಂಡರ್‌ಗಳ ಮೇಲಿನ ಜಿಎಸ್‌ಟಿ ಪ್ರಮಾಣದ ಕುರಿತು ಸಚಿವರ ಸಮಿತಿಯು ಜೂನ್‌ 8ರಂದು ವರದಿ ನೀಡಲಿದೆ.

ಸಚಿವರ ಸಮಿತಿಯು ತೆರಿಗೆ ಪ್ರಮಾಣದ ಪರಿಶೀಲನೆ ನಡೆಸಲಿದೆ ಎಂದು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು. ಅದರಂತೆ, ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಅವರ ನೇತೃತ್ವದಲ್ಲಿ ಎಂಟು ಸಚಿವರ ಸಮಿತಿಯೊಂದನ್ನು ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT