ADVERTISEMENT

ಜಿಎಸ್‌ಎಂಎ ಮಂಡಳಿಯ ಪ್ರಭಾರ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 17:39 IST
Last Updated 4 ಫೆಬ್ರುವರಿ 2025, 17:39 IST
ಗೋಪಾಲ್ ವಿಠ್ಠಲ್
ಗೋಪಾಲ್ ವಿಠ್ಠಲ್   

ಬೆಂಗಳೂರು: ಭಾರ್ತಿ ಏರ್‌ಟೆಲ್‌ನ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಜಿಎಸ್‌ಎಂಎ ಉಪಾಧ್ಯಕ್ಷರಾಗಿರುವ ಗೋಪಾಲ್ ವಿಠ್ಠಲ್ ಅವರು, ಜಿಎಸ್‌ಎಂಎ ಪ್ರಭಾರ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಅಧ್ಯಕ್ಷರಾಗಿದ್ದ ಓಸೆ ಮರಿಯ ಆಲ್ವರಿಸ್ ಪಲೆಟ್ ಅವರು ರಾಜೀನಾಮೆ ನೀಡಿದ್ದಾರೆ. ತೆರವಾದ ಈ ಸ್ಥಾನಕ್ಕೆ ಗೋಪಾಲ್ ನೇಮಕಗೊಂಡಿದ್ದಾರೆ. ಅವರು ಇತ್ತೀಚೆಗೆ ಜಿಎಸ್‌ಎಂಎ ಮಂಡಳಿಯ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದರು. 2019-2020ರ ಅವಧಿಯಲ್ಲಿ ಮಂಡಳಿಯ ಪ್ರಮುಖ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ದೂರಸಂಪರ್ಕ ಸೇವೆಗಳ ಪೂರೈಕೆದಾರರು, ಹ್ಯಾಂಡ್‌ಸೆಟ್ ಮತ್ತು ಸಾಧನ ತಯಾರಕರು, ಸಾಫ್ಟ್‌ವೇರ್ ಸಂಸ್ಥೆಗಳು,  ಇಂಟರ್‌ನೆಟ್ ಸಂಸ್ಥೆಗಳು, ಅದಕ್ಕೆ ಸಂಬಂಧಿಸಿದ ಉದ್ದಿಮೆ ಕ್ಷೇತ್ರಗಳ ಸಂಸ್ಥೆಗಳನ್ನು ಒಳಗೊಂಡಂತೆ ಜಗತ್ತಿನಾದ್ಯಂತ ಇರುವ ದೂರಸಂಪರ್ಕ ಕ್ಷೇತ್ರದ 1,100ಕ್ಕೂ ಹೆಚ್ಚಿನ ಸಂಸ್ಥೆಗಳಿರುವ ಜಾಗತಿಕ ದೂರ ಸಂವಹನದ ಉದ್ದಿಮೆಯನ್ನು ಜಿಎಸ್‌ಎಂಎ ಪ್ರತಿನಿಧಿಸುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.