ADVERTISEMENT

3.82 ಕೋಟಿ ಟನ್‌ ಗೋಧಿ ಸಂಗ್ರಹ

ಪಿಟಿಐ
Published 17 ಜೂನ್ 2020, 14:21 IST
Last Updated 17 ಜೂನ್ 2020, 14:21 IST
ಗೋಧಿ ಸಂಗ್ರಹ– ಸಾಂದರ್ಭಿಕ ಚಿತ್ರ
ಗೋಧಿ ಸಂಗ್ರಹ– ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು 2020–21ನೇ ಮಾರುಕಟ್ಟೆ ವರ್ಷದಲ್ಲಿ ಜೂನ್‌17ರವರೆಗೆ ದಾಖಲೆಯ 3.82 ಕೋಟಿ ಟನ್‌ಗಳಷ್ಟು‌ ಗೋಧಿ ಸಂಗ್ರಹಿಸಿದೆ.

ಪ್ರಸಕ್ತ ಮಾರುಕಟ್ಟೆ ವರ್ಷಕ್ಕೆ (ಏಪ್ರಿಲ್‌–ಮಾರ್ಚ್‌) ಒಟ್ಟಾರೆ 4.07 ಕೋಟಿ ಟನ್‌ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ.ಈ ಹಿಂದೆ 2012–13ರಲ್ಲಿ 3.81 ಕೋಟಿ ಟನ್‌ಗಳಷ್ಟು ಗರಿಷ್ಠ ಪ್ರಮಾಣದಲ್ಲಿ ಸಂಗ್ರಹವಾಗಿತ್ತು.

ದೇಶದಾದ್ಯಂತ 42 ಲಕ್ಷ ರೈತರಿಗೆ ಒಟ್ಟಾರೆ ₹73,500 ಕೋಟಿ ಮೊತ್ತದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.