ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ (ಅಕ್ಟೋಬರ್–ಮಾರ್ಚ್) ₹6.77 ಲಕ್ಷ ಕೋಟಿ ಸಂಗ್ರಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬಾಂಡ್ ಹಂಚಿಕೆ ಮೂಲಕ ಈ ಮೊತ್ತದ ಸಂಗ್ರಹಕ್ಕೆ ಮುಂದಾಗಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯವು ಶುಕ್ರವಾರ ತಿಳಿಸಿದೆ.
ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಅಂದಾಜಿಗಿಂತ ₹5 ಸಾವಿರ ಕೋಟಿ ಸಾಲ ಕಡಿಮೆ ಪಡೆದಿದೆ. ಈಗ ಅಕ್ಟೋಬರ್–ಮಾರ್ಚ್‌ನಲ್ಲಿ ಕೂಡ ಇಷ್ಟೇ ಪ್ರಮಾಣದಲ್ಲಿ ಕಡಿಮೆ ಪಡೆಯುತ್ತಿದೆ. ಒಟ್ಟು ₹10 ಸಾವಿರ ಕೋಟಿ ಸಾಲ ಅಂದಾಜಿಗಿಂತ ಕಡಿಮೆ ಪಡೆಯುತ್ತಿದೆ.
2025–26ರ ಬಜೆಟ್‌ನಲ್ಲಿ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ₹14.82 ಲಕ್ಷ ಕೋಟಿ ಸಾಲ ಪಡೆಯಲು ಯೋಜಿಸಿತ್ತು. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್–ಸೆಪ್ಟೆಂಬರ್) ₹8 ಲಕ್ಷ ಕೋಟಿ ಸಾಲ ಪಡೆಯಲು ಯೋಜಿಸಿತ್ತು. ಆದರೆ, ₹7.95 ಲಕ್ಷ ಕೋಟಿ ಸಾಲ ಪಡೆದಿತ್ತು. ಈಗ ದ್ವಿತೀಯಾರ್ಧದಲ್ಲಿ ₹6.77 ಲಕ್ಷ ಕೋಟಿ ಪಡೆಯಲಿದೆ. ಒಟ್ಟು ₹14.72 ಲಕ್ಷ ಕೋಟಿ ಆಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.