ADVERTISEMENT

ಆಕಸ್ಮಿಕ ಲಾಭ ತೆರಿಗೆ ಕಡಿತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 10:59 IST
Last Updated 2 ಸೆಪ್ಟೆಂಬರ್ 2023, 10:59 IST
<div class="paragraphs"><p>ude oil</p></div>

ude oil

   

ನವದೆಹಲಿ (ಪಿಟಿಐ): ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ಶನಿವಾರದಿಂದ ಜಾರಿಗೆ ಬರುವಂತೆ ತಗ್ಗಿಸಿದೆ. ಆದರೆ ಡೀಸೆಲ್‌ ಹಾಗೂ ವಿಮಾನ ಇಂಧನ (ಎಟಿಎಫ್‌) ರಫ್ತು ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ.

ದೇಶದಲ್ಲಿ ತಯಾರಾಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ ₹7,100 ರಿಂದ ₹6,700ಕ್ಕೆ ಇಳಿಕೆ ಮಾಡಲಾಗಿದೆ.

ADVERTISEMENT

ಡೀಸೆಲ್‌ ರಫ್ತು ಮೇಲಿನ ತೆರಿಗೆಯನ್ನು ಪ್ರತಿ ಲೀಟರಿಗೆ ₹5.50 ರಿಂದ ₹6ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ವಿಮಾನ ಇಂಧನದ (ಎಟಿಎಫ್‌) ಮೇಲಿನ ತೆರಿಗೆಯನ್ನು ಪ್ರತಿ ಲೀಟರಿಗೆ ₹2ರಿಂದ ₹4ಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಪೆಟ್ರೋಲ್‌ ರಫ್ತು ಮೇಲೆ ಶೂನ್ಯ ತೆರಿಗೆಯನ್ನು ಮುಂದುವರಿಸಲಾಗಿದೆ.

ಹಿಂದಿನ ಎರಡು ವಾರಗಳಲ್ಲಿ ಇಂಧನದ ಸರಾಸರಿ ದರದ ಆಧಾರದ ಮೇಲೆ ಪ್ರತಿ 15 ದಿನಗಳಿಗೆ ಒಮ್ಮೆ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.