ನವದೆಹಲಿ: ಕೇಂದ್ರ ಸರ್ಕಾರವು ಹಳದಿ ಬಟಾಣಿ ಮೇಲಿನ ಆಮದು ಸುಂಕ ಹಾಗೂ ಕನಿಷ್ಠ ರಫ್ತು ದರದ (ಎಂಐಪಿ) ವಿನಾಯಿತಿಯನ್ನು ಮುಂದಿನ ವರ್ಷದ ಫೆಬ್ರುವರಿಗೆ ವಿಸ್ತರಿಸಿದೆ.
ಆಮದು ಬಗ್ಗೆ ರಫ್ತು ಮೇಲ್ವಿಚಾರಣೆ ವ್ಯವಸ್ಥೆಯಡಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಸರಕಿಗೆ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಬಂದರು ಪ್ರದೇಶದಲ್ಲಿ ಈ ಉತ್ಪನದ ಆಮದು ಮೇಲೆ ವಿಧಿಸಿದ್ದ ನಿರ್ಬಂಧವನ್ನೂ ಹಿಂಪಡೆಯಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.