ADVERTISEMENT

ಅಡುಗೆ ಎಣ್ಣೆ ದಾಸ್ತಾನು: ಅವಧಿ ವಿಸ್ತರಣೆ

ಪಿಟಿಐ
Published 31 ಮಾರ್ಚ್ 2022, 19:57 IST
Last Updated 31 ಮಾರ್ಚ್ 2022, 19:57 IST
   

ನವದೆಹಲಿ: ಅಡುಗೆ ಎಣ್ಣೆ ಮತ್ತು ಎಣ್ಣೆಬೀಜಗಳ ದಾಸ್ತಾನಿಗೆ ಮಿತಿ ಹೇರಿದ್ದನ್ನು ಕೇಂದ್ರ ಸರ್ಕಾರವು ಡಿಸೆಂಬರ್‌ವರೆಗೆ ವಿಸ್ತರಿಸಿ ಗುರುವಾರ ಆದೇಶಿಸಿದೆ. ದೇಶಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯನ್ನು ಮಿತಿಯಲ್ಲಿ ಇರಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ, ದಾಸ್ತಾನು ಮಿತಿ ನಿಗದಿ ಮಾಡಿತ್ತು. ರಿಟೇಲ್ ಮಾರಾಟಗಾರರು ಮತ್ತು ರಿಟೇಲ್ ಮಳಿಗೆಗಳು ತಲಾ 30 ಕ್ವಿಂಟಲ್, ಸಗಟು ಮಾರಾಟಗಾರರು 500 ಕ್ವಿಂಟಲ್, ದೊಡ್ಡ ಸಂಖ್ಯೆಯಲ್ಲಿ ಮಳಿಗೆಗಳನ್ನು ಹೊಂದಿರುವ ಕಂಪನಿಗಳ ಡಿಪೊಗಳು 1,000 ಕ್ವಿಂಟಲ್ ಅಡುಗೆ ಎಣ್ಣೆ ದಾಸ್ತಾನು ಇಟ್ಟುಕೊಳ್ಳಬಹುದು ಎಂದು ಹೊಸ ಆದೇಶದಲ್ಲಿ ಹೇಳಲಾಗಿದೆ. ಅಡುಗೆ ಎಣ್ಣೆ ಸಂಸ್ಕರಣೆ ಮಾಡುವವರು 90 ದಿನಗಳವರೆಗಿನ ಅಗತ್ಯದಷ್ಟು ದಾಸ್ತಾನು ಇರಿಸಿಕೊಳ್ಳಲು ಅವಕಾಶ ಇದೆ.

ಎಣ್ಣೆಬೀಜಗಳ ರಿಟೇಲ್ ಮಾರಾಟಗಾರರು 100 ಕ್ವಿಂಟಲ್‌ವರೆಗೆ, ಸಗಟು ವ್ಯಾಪಾರಿಗಳು 2,000 ಕ್ವಿಂಟಲ್‌ವರೆಗೆ ದಾಸ್ತಾನು ಮಾಡಿಕೊಳ್ಳಬಹುದು. ರಫ್ತು ಮತ್ತು ಆಮದುದಾರಿಗೆ ಕೆಲವು ಷರತ್ತುಗಳೊಂದಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.