ನವದೆಹಲಿ: ಕೇಂದ್ರ ಸರ್ಕಾರವು ಗೋಧಿ ದಾಸ್ತಾನು ಮಿತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶವನ್ನು 2026ರ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿದೆ.
ಆಹಾರ ಭದ್ರತೆ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ವರ್ತಕರು, ಸಗಟುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಈ ಆದೇಶ ಪಾಲಿಸಬೇಕಿದೆ ಎಂದು ಹೇಳಿದೆ.
ಹೊಸ ನಿಯಮಾವಳಿ ಅನ್ವಯ ವರ್ತಕರು ಮತ್ತು ಸಗಟುದಾರರು 3 ಸಾವಿರ ಟನ್, ಚಿಲ್ಲರೆ ಮತ್ತು ದೊಡ್ಡಮಟ್ಟದ ಚಿಲ್ಲರೆ ಮಾರಾಟಗಾರರು ಪ್ರತಿ ಮಳಿಗೆಗೆ 10 ಟನ್‌ನಷ್ಟು ದಾಸ್ತಾನಿಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಂಸ್ಕರಣೆ ಮಾಡುವವರು ಪ್ರತಿ ತಿಂಗಳ ಸಂಸ್ಕರಣಾ ಸಾಮರ್ಥ್ಯದ ಪೈಕಿ ಶೇ 70ರಷ್ಟು ಗೋಧಿಯನ್ನಷ್ಟೇ ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶವಿದೆ.
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಪ್ರತಿ ದಿನದ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕಿದೆ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.