ನವದೆಹಲಿ: ‘ಅಮೆರಿಕದ ಸುಂಕ ನೀತಿಯು ದೇಶೀಯ ಉಕ್ಕು ವಲಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವು ಅಮೆರಿಕಕ್ಕೆ 1 ಲಕ್ಷ ಟನ್‌ಗಿಂತ ಕಡಿಮೆ ಪ್ರಮಾಣದಲ್ಲಿ ಉಕ್ಕು ರಫ್ತು ಮಾಡುತ್ತದೆ. ಹಾಗಾಗಿ, ಸುಂಕ ನೀತಿಯು ಈ ವಲಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಎರಡನೇ ಹಂತದಲ್ಲಿ ಮಿಶ್ರಲೋಹದ ಉಕ್ಕು ತಯಾರಿಕೆಗೆ ಸಂಬಂಧಿಸಿದಂತೆ 73 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.
ಗುಣಮಟ್ಟದ ಮಿಶ್ರಲೋಹದ ಉಕ್ಕು ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆ ಸಾಧಿಸಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಪಿಎಲ್‌ಐ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕಡಿಮೆ ಗುಣಮಟ್ಟದ ಉಕ್ಕು ಆಮದಿಗೆ ಸರ್ಕಾರ ಒತ್ತು ನೀಡುವುದಿಲ್ಲ. ದೇಶೀಯವಾಗಿ ತಯಾರಿಸುವ ಮತ್ತು ಆಮದು ಮಾಡಿಕೊಳ್ಳುವ ಉಕ್ಕಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅಗತ್ಯ ನಿಯಮಾವಳಿ ರೂಪಿಸಲಾಗಿದೆ. ದೇಶೀಯವಾಗಿ ಉತ್ತಮ ಗುಣಮಟ್ಟದ ಉಕ್ಕು ಮಾರಾಟಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.